BUEATY TIPS: ರಾಸಾಯನಿಗಳಿಂದ ಕೂಡಿದ ಸನ್‌ ಸ್ಕ್ರೀನನ್ನ ಬಳಸುವ ಬದಲು ನೈಸರ್ಗಿಕವಾಗಿ ಸಿಗುವ ಪರ್ದಾರ್ಥಗಳಿಂದ ಸನ್ ಸ್ಕ್ರೀನ್ನಾಗಿ ಯೂಸ್‌ ಮಾಡಿ

ಸನ್‌ಸ್ಕ್ರೀನ್ ಎನ್ನುವುದು ನಮ್ಮ ಬ್ಯೂಟಿ ಕಾಪಾಡಿಕೊಳ್ಳಲು ಅಗತ್ಯವಾಗಿರುವ ಒಂದು ಪ್ರಮುಖ ಉತ್ಪನ್ನ.ಸೂರ್ಯನ ಹಾನಿಕಾರಕ ಕಿರಣಗಳು ಹಾಗೂ ಮೊಬೈಲ್,ಕಂಪ್ಯೂಟರ್ ನಿಂದ ಹೊರಬರುವ ಕಿರಣಗಳಿಂದ ನಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ, ಪ್ರತೀ ಋತುಮಾನದಲ್ಲೂ ಸನ್ ಸ್ಕ್ರೀನ್ ಬಳಸಬೇಕು.

ಆದರೆ ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಸನ್ ಸ್ಕ್ರೀನ್ ಗಳು ರಾಸಾಯನಿಕಗಳಿಂದ ಕೂಡಿದ್ದು, ಚರ್ಮಕ್ಕೆ ಹಾನಿಮಾಡುತ್ತವೆ.ಆದ್ದರಿಂದ ನೀವು ನೈಸರ್ಗಿಕವಾಗಿ ಸಿಗುವ ಕೆಲವೊಂದು ಪದಾರ್ಥಗಳನ್ನು ಸನ್ ಸ್ಕ್ರೀನ್ ಆಗಿ ಬಳಕೆ ಮಾಡಬಹುದು. ಇದು ಉತ್ತಮ ಫಲಿತಾಂಶ ನೀಡುವುದಲ್ಲದೇ, ತ್ವಚೆಗಾಗುವ ಅಡ್ಡಪರಿಣಾಮಗಳಿಂದ ನಿಮ್ಮನ್ನು ಕಾಪಾಡುತ್ತವೆ.

ತೆಂಗಿನ ಎಣ್ಣೆ:  ತೆಂಗಿನ ಎಣ್ಣೆಯು ಸನ್ ಸ್ಕ್ರೀನ್ ಆಗಿ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆ ನಿಮ್ಮ ದೇಹದ ಮೇಲೆ ಬೀಳುವ 20% ಸೂರ್ಯನ ಕಿರಣಗಳನ್ನು ತಡೆಯಬಹುದು. ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಲು ಬಯಸಿದರೆ, ತೆಂಗಿನ ಎಣ್ಣೆ ಸಾಕು. ಆದರೆ ಹೆಚ್ಚು ಕಾಲ ಇರಬೇಕಾದರೆ, ಅದನ್ನು ಆಗಾಗ ಹಚ್ಚುತ್ತಿರಬೇಕು. ತೆಂಗಿನ ಎಣ್ಣೆ ನಿಮ್ಮ ಚರ್ಮವನ್ನು ಸೂರ್ಯನ ಹಾನಿಯಿಂದ ತಡೆಯುವುದಲ್ಲದೇ, ತೇವಾಂಶಭರಿತವಾಗಿರಿಸುತ್ತದೆ, ಜೊತೆಗೆ ಉರಿಯೂತವನ್ನು ಕಡಿಮೆ ಮಾಡಿ, ಹೆಚ್ಚು ಕಾಲ ಮೃದುವಾಗಿರಿಸುತ್ತದೆ.

ಅಲೋವೆರಾ ಜೆಲ್: ಸಾಮಾನ್ಯವಾಗಿ, ಅಲೋವೆರಾವನ್ನು ಸೂರ್ಯನ ಬಿಸಿಲಿಗೆ ಹೋಗಿ ಬಂದ ನಂತರ ಚರ್ಮಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಬಿಸಿಲಿನ ಬೇಗೆ, ಉರಿಯೂತ ಮತ್ತು ರೆಡ್ ನೆಸ್ ಕಡಿಮೆ ಮಾಡಲು ಇದು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಆದರೆ ಇದನ್ನು ಸನ್ ಸ್ಕ್ರೀನ್ ಆಗಿ ಬಳಸಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಇದು 20% ಸೂರ್ಯನ ಬೆಳಕನ್ನು ತಡೆಯುವ ಮೂಲಕ ಚರ್ಮಕ್ಕೆ ರಕ್ಷಣೆ ನೀಡುತ್ತದೆ, ಆದ್ದರಿಂದ ಆಗಾಗ ಇದನ್ನು ಬಳಸುತ್ತಿರಬೇಕು. ಅಲೋವೆರಾ ಕೇವಲ ಸನ್‌ಸ್ಕ್ರೀನ್‌ನಂತೆ ಅಲ್ಲ, ಚರ್ಮವನ್ನು ತೇವಗೊಳಿಸಿ, ಕಲೆಗಳನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ.

ಎಳ್ಳೆಣ್ಣೆ: ಸೂರ್ಯನ ಬಿಸಿಲಿಗೆ ಹೋಗುವ ಮುನ್ನ ಎಳ್ಳೆಣ್ಣೆಯ ಲೇಪನವು ನಿಮ್ಮ ಚರ್ಮವನ್ನು ಬಿಸಿಲಿನಿಂದ ತಡೆಯಲು ಸಹಾಯ ಮಾಡುತ್ತದೆ. ಈ ಎಣ್ಣೆ ತ್ವಚೆಯನ್ನು 30% ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಿಸುತ್ತದೆ. ನೀವು ಹೆಚ್ಚು ಹೊತ್ತು ಬಿಸಿಲಿನಲ್ಲಿ ಇರಲು ಬಯಸಿದರೆ ನೀವು ಎಣ್ಣೆಯನ್ನು ಪುನಃ ಹಚ್ಚಬಹುದು. ಎಳ್ಳೆಣ್ಣೆ ಚರ್ಮಕ್ಕೆ ಒಳ್ಳೆಯದು. ಇದು ವಿಟಮಿನ್ ಇ ಅನ್ನು ಹೊಂದಿದ್ದು, ಚರ್ಮವನ್ನು ಹಾನಿಕಾರಕ ಯುವಿ ಕಿರಣಗಳಿಂದ ಮಾತ್ರವಲ್ಲದೆ ಕಲ್ಮಷ ಮತ್ತು ಕಲುಷಿತ ಗಾಳಿಯಿಂದಲೂ ರಕ್ಷಿಸುತ್ತದೆ.

Author:

...
Sub Editor

ManyaSoft Admin

share
No Reviews