ಮಧುಗಿರಿ:
ಸರ್ಕಾರಿ ಶಾಲೆಗಳನ್ನು ಕೆಲ ಸಂಸ್ಥೆಗಳು, ಶ್ರೀಮಂತರು, ಸಮಾಜ ಸೇವಕರು, ಸಿನಿಮಾ ತಾರೆಯರು ದತ್ತು ಪಡೆದು ತಮ್ಮ ಸೇವೆಯನ್ನು ಮಡ್ತಾರೆ.. ಇನ್ನು ಕೆಲವರು ಸರ್ಕಾರಿ ಶಾಲೆಗೆ ತಮ್ಮ ಕೈಲಾದ ಸೇವೆಯನ್ನು ಮಾಡಿದ್ರು. ಈ ಬೆನ್ನಲ್ಲೇ ಇಂಡಿಗೋ ಪೈಂಟ್ಸ್ ಕಂಪನಿಯು ಸರ್ಕಾರಿ ಶಾಲೆಗೆ ಹೊಸ ರೂಪ ನೀಡಲು ಮುಂದಾಗಿದೆ. ಹೌದು ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಅಮಾರವತಿ ಗ್ರಾಮದ ಸರ್ಕಾರಿ ಶಾಲೆಗೆ ಇಂಡಿಗೋ ಫೈಂಟ್ಸ್ ಕಂಪನಿಯು ಸುಮಾರು 70 ಸಾವಿರ ವೆಚ್ಚದ ಪೈಂಟ್ಸ್‌ನನ್ನು ವಿತರಣೆ ಮಾಡಲಾಯ್ತು. ಇಂಡಿಗೋ ಪೈಂಟ್ಸ್ ಕಂಪನಿಯ ಬ್ರಾಂಚ್ ಮ್ಯಾನೇಜರ್ ಸಜೀವ್ ಎನ್ ನಾಯರ್ ಸರ್ಕಾರಿ ಶಾಲೆಗೆ ತೆರಳಿ ಪೈಂಟ್ಸ್ ವಿತರಿಸಿದ್ರು. ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಬಾಲರಾಜು, ಗ್ರಾ.ಪಂ. ಸದಸ್ಯ ದಾನೇಗೌಡ, ಅಂಗಡಿ ಮಾಲೀಕ ಸತೀಶ್ ಟಿ.ಪಿ. ಕಂಪನಿಯ ಅಧಿಕಾರಿಗಳಾದ ಅಶ್ವತ್, ಸೈಯದ್ ಖಾದರ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಬ್ರಾಂಚ್ ಮ್ಯಾನೇಜರ್ ಸಜೀವ್ ಎನ್ ನಾಯರ್, ಗ್ರಾಮೀಣ ಭಾಗದ ಶಾಲೆಗಳಿಗೆ ನೆರವಾಗುವ ಉದ್ದೇಶದಿಂದ ಇಂಡಿಗೋ ಉತ್ಸವ ಎಂಬ ಯೋಜನೆಯೊಂದಿಗೆ ಕಂಪನಿ ಮುಂದಡಿ ಇಟ್ಟಿದೆ. ಇದಕ್ಕಾಗಿ ಕಂಪನಿಯ ಪಾಲುದಾರರಾಗಿ ಮಧುಗಿರಿಯ ಸತೀಶ್ ರವರು ಇಲ್ಲಿ ಶಾಖೆ ತೆರೆದು ಉತ್ತಮ ವ್ಯಾಪಾರ ಮಾಡಿದ ಪರಿಣಾಮ ಕಂಪನಿ ಈ ಸೌಲಭ್ಯ ಕಲ್ಪಿಸಿದೆ. ಇಂದು ಅಮರಾವತಿ ಗ್ರಾಮಸ್ಥರ ಕೋರಿಕೆ ಮೇರೆಗೆ ಹೆಚ್ಚುವರಿಯಾಗಿ ಈ ಸೇವೆ ನೀಡುತ್ತಿದ್ದು ನಮಗೂ ಸಂತಸ ತಂದಿದೆ ಕಂಪನಿ ತಾನು ಬೆಳೆಯುವುದಲ್ಲದೆ ಸಮಾಜಕ್ಕೂ ಸೇವೆ ನೀಡುವ ಉದ್ದೇಶದಿಂದ ಈ ಸೇವಾ ಕಾರ್ಯ ಕೈಗೊಂಡಿದೆ ಎಂದರು. ಸಿಆರ್‌ಪಿ ಕಾಮರಾಜು ಮಾತನಾಡಿ, ಇಂತಹ ಕಾರ್ಯಕ್ರಮದಿಂದ ಶಾಲೆಯ ವಾತಾವರಣ ಸುಧಾರಿಸುತ್ತಿದ್ದು, ಇದಕ್ಕೆ ಕಾರಣರಾದ ಇಂಡಿಗೋ ಕಂಪನಿಯ ಸಜೀವ್ ಎನ್ ನಾಯರ್ ಅವರಿಗೆ ಅಭಿನಂದನೆ ಸಲ್ಲಿಸಿದ್ರು.
ಮುಖ್ಯ ಶಿಕ್ಷಕ ರಂಗಪ್ಪ ಮಾತನಾಡಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಂತಹ ಸೇವಾ ಮನೋಭಾವ ಇರುವ ಕರ್ಪೋರೇಟ್ ಕಂಪನಿಗಳು ಬಹಳ ಕಡಿಮೆ. ಅನುದಾನವಿದ್ದರೂ ಪ್ರತ್ಯೇಕವಾಗಿ ಸೇವೆ ಮಾಡುವುದನ್ನು ಮುಕ್ತಕಂಠದಿಂದ ಶ್ಲಾಘಿಸಿದರು.