ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಭಾರತ 8 ಚಿನ್ನದೊಂದಿಗೆ ಒಟ್ಟು 24 ಪದಕಗಳ ಜಯ!

ಭಾರತವು 2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ಸ್ಪರ್ಧೆಯಲ್ಲಿ ಭಾರತ ಶ್ರೇಷ್ಠ ಪ್ರದರ್ಶನ ನೀಡಿದ್ದು, ಒಟ್ಟು 24 ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದೆ. ಭಾರತ  8 ಚಿನ್ನ, 9 ಬೆಳ್ಳಿ ಮತ್ತು 7 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಒಟ್ಟು 24 ಪದಕಗಳೊಂದಿಗೆ ಏಷ್ಯಾದ ಕ್ರೀಡಾಂಗಣದಲ್ಲಿ ತನ್ನ ಪ್ರಬಲ ಸಾಧನೆಯನ್ನು ತೋರಿಸಿದೆ.

ಈ ಬಾರಿ ಭಾರತವು ತನ್ನ ದಿಟ್ಟ ಹಾಗೂ ಶಿಸ್ತಿನಿಂದ ಕೂಡಿದ ಆಟಗಾರರ ಮೂಲಕ ಏಷ್ಯಾದ ಇತರೆ ರಾಷ್ಟ್ರಗಳ ವಿರುದ್ಧ ಭರ್ಜರಿ ಮುನ್ನಡೆ ಸಾಧಿಸಿದೆ. ಪುರುಷರ ಜಾವೆಲಿನ್ ಎಸೆತದಲ್ಲಿ ಸಚಿನ್ ಯಾದವ್ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಗೆದ್ದರೆ, ಮಹಿಳೆಯರ 5000 ಮೀ. ರೇಸ್‌ನಲ್ಲಿ ಪಾರುಲ್ ಚೌಧರಿ 15 ನಿಮಿಷ 15.33 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 2ನೇ ಬೆಳ್ಳಿ ಗೆದ್ದರು. 3000 ಮೀ. ಸ್ಟೀಪಲ್ ಚೇಸ್‌ನಲ್ಲೂ ಕೂಡಾ ಪಾರುಲ್‌ ಚೌಧರಿ ಅವರು 2ನೇ ಸ್ಥಾನಿಯಾಗಿ ಬೆಳ್ಳಿ ಪದಕಗಳಿಸಿದರು.

ಮಹಿಳೆಯರ 4x100 ಮೀ. ರಿಲೇ ಓಟದಲ್ಲಿ ಅಭಿನಯ, ಸಬಾನಿ ನಂದಾ, ನಿತ್ಯಾ ಹಾಗೂ ಕರ್ನಾಟಕದ ಸ್ನೇಹಾ ಎಸ್.ಎಸ್. ಭಾಗವಹಿಸಿದ್ದ ತಂಡ 43.86 ಸೆಕೆಂಡುಗಳಲ್ಲಿ  ಗುರಿ ತಲುಪಿ ಬೆಳ್ಳಿ ಪದಕ ಜಯಿಸಿತು. ಪುರುಷರ 200 ಮೀ. ಓಟದಲ್ಲಿ ಅನಿಮೇಶ್ ಕುಜೂರ್ ಕಂಚಿನ ಪದಕ ಪಡೆದರೆ, 800 ಮೀ. ಓಟದಲ್ಲಿ ಪೂಜಾ ಶ್ರೇಷ್ಠ ಪ್ರದರ್ಶನ ನೀಡಿ ಕಂಚು ಗೆದ್ದರು. 400 ಮೀ. ಹರ್ಡಲ್ಸ್‌ನಲ್ಲಿ ವಿದ್ಯಾ ರಾಮರಾಜ್ 56.46 ಸೆಕೆಂಡುಗಳಲ್ಲಿ ಓಡಿ ಕಂಚಿನ ಪದಕ ಗೆದ್ದರು.

ಹೇಮಾ ದಾಸ್ ಅವರು ಮಹಿಳಾ ವಿಭಾಗದ 400 ಮೀ. ಓಟದಲ್ಲಿ ಭರ್ಜರಿ ಪ್ರದರ್ಶನ ನೀಡಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಅವಿನಾಶ್ ಸಾಧಿವ್ ಅವರ ಶ್ರೇಷ್ಠ ಪ್ರದರ್ಶನದ ನೆರವಿನಿಂದ ಭಾರತ 4x400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಈ ಸಾಧನೆಯೊಂದಿಗೆ ಭಾರತವು ಏಷ್ಯಾದ ಅಖಾಡದಲ್ಲಿ ತನ್ನ ಕ್ರೀಡಾ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರಬಲವಾಗಿ ಪ್ರದರ್ಶಿಸಿದೆ. ಭಾರತೀಯ ಅಥ್ಲೆಟ್ಸ್ ತಂಡದ ಈ ಸಾಧನೆಗೆ ರಾಷ್ಟ್ರದಾದ್ಯಂತ ಅಭಿನಂದನೆಗಳ ಸುರಿಮಳೆ ಜೋರಾಗಿದೆ.

 

Author:

...
Sushmitha N

Copy Editor

prajashakthi tv

share
No Reviews