ಗುಬ್ಬಿ:
ಗುಬ್ಬಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಲೆವೆಲ್ ಪಬ್ಲಿಕ್ ಹೆಲ್ತ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಆರ್ ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದ್ರು. ಈ ವೇಳೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ, ಸದಸ್ಯರಾದ ಮಹಮ್ಮದ್ ಸಾಧಿಕ್, ಕುಮಾರ್, ಸಿ.ಮೋಹನ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿಎಚ್ ಜಗನ್ನಾಥ್, ಮುಖಂಡರಾದ ಅಶೋಕ್ ,ನರಸಿಂಹಯ್ಯ ಸೇರಿ ಹಲವಾರು ಮಂದಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್ ಶ್ರೀನಿವಾಸ್, ಅಧಿಕಾರಕ್ಕಾಗಿ ಬಕೆಟ್ ಹಿಡಿದು ಸಲಾಮ್ ಹೊಡಿಯೋ ಪ್ರವೃತ್ತಿ ನನಗಿಲ್ಲ. ವೈಯಕ್ತಿಕವಾಗಿ ನನಗೆ ಅನ್ನಿಸುವ ಕೆಲ್ಸ ಮಾಡ್ತಿನಿ ಅಂತಾ ಆಕ್ರೋಶಭರಿತವಾಗಿ ಹೇಳಿದ್ರು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೋಗಿ ಯಾರ ಜೊತೆಯೂ ಸಂಬಂಧ ಬೆಳೆಸುವುದೇನು ಇಲ್ಲ, ಜೊತೆಗೆ ಯಾವುದೇ ನಾಯಕರ ಬಗ್ಗೆ ನನಗೆ ಭಿನ್ನಾಭಿಪ್ರಾಯ ಕೂಡ ಇಲ್ಲ, ಯಾರೇನು ನನ್ನ ಆಸ್ತಿಯ ಹೊಡೆದಿಲ್ಲ, ಹಾಗಾಗಿ ಯಾರನ್ನು ಓಲೈಕೆ ಮಾಡಿ ರಾಜಕೀಯ ಮಾಡುವ ಸ್ಥಿತಿ ನನಗಿಲ್ಲ ಎಂದರು.
ಇನ್ನು ದಲಿತ ಸಿಎಂ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಸ್.ಆರ್ ಶ್ರೀನಿವಾಸ್, ದಲಿತ ಮುಖ್ಯಮಂತ್ರಿ ವಿಚಾರ ಹೈಕಮಾಂಡ್ ಗೆ ಬಿಟ್ಟ ವಿಚಾರ. ತಲೆಕೆಟ್ಟವರು ರಾಜಕೀಯದಲ್ಲಿ ಕೆಲವರು ಇದ್ದಾರೆ,.ಅವರಿಗೆ ಅನಿಸಿದ ಹಾಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾರೆ. ವ್ಯವಸ್ಥೆ ಕೆಟ್ಟಿದೆ ಅದನ್ನ ಬದಲಾವಣೆ ಮಾಡಲು ಆಗಲ್ಲ. ನಮ್ಮೆಲ್ಲ ಕೋತಿ ಆಟಗಳನ್ನು ಜನ ನೋಡುತ್ತಿದ್ದಾರೆ ಎಂದು ಕಾಲೆಳೆದರು.