ರುಚಿಕರವಾದ ಎಗ್ ಕುರ್ಮಾ ಮಾಡುವ ವಿಧಾಮ , ಎಗ್ ಕುರ್ಮಾ ಮಾಡಲು ಬೇಕಾಗುವ ಸಾಮಗ್ರಿಗಳು
*ಮೊಟ್ಟೆ-6, ಈರುಳ್ಳಿ- 1, ಟೊಮೆಟೊ- 1, ಹಸಿ ಮೆಣಸಿನಕಾಯಿ-1-2, ಶುಂಠಿ ಬೆಳ್ಳುಳ್ಳಿ ಪೇಸ್ಟ್-ಅರ್ಧ ಚಮಚ, ಅರಿಶಿಣ ಪುಡಿ- 1/4 ಚಮಚ, ಅಚ್ಚ ಖಾರದ ಪುಡಿ- 1 ಚಮಚ, ದನಿಯಾ ಪುಡಿ- ಅರ್ಧ ಚಮಚ, ಕಾಳು ಮೆಣಸಿನ ಪುಡಿ- ಅರ್ಧ ಚಮಚ, ಗರಂ ಮಸಾಲ- 1 ಚಮಚ, ಎಣ್ಣೆ- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕೊತ್ತಂಬರಿ ಸೊಪ್ಪು- ಸ್ಬಲ್ಪ, ತೆಂಗಿನ ಕಾಯಿ- ತುರಿದದ್ದು (ಅರ್ಧ ತೆಂಗಿನಕಾಯಿ), ಗೋಡಂಬಿ- 8, ಹಸಿಮೆಣಸಿನಕಾಯಿ- 1, ಜೀರಿಗೆ- 1/4 ಚಮಚ, ಸೋಂಪು- 1/4 ಚಮಚ, ಪಲಾವ್ ಎಲೆ- 1, ನಕ್ಷತ್ರ ಮೊಗ್ಗು- 1, ಲವಂಗ- 2, ಚಕ್ಕೆ- ಅರ್ಧ ಇಂಚಿನಷ್ಟು, ಏಲಕ್ಕಿ- 1, ಜೀರಿಗೆ 1/4 ಚಮಚ
ಮಾಡುವ ವಿಧಾನ:
6 ಮೊಟ್ಟೆಯನ್ನು ಬೇಯಿಸಿ ಸಿಪ್ಪೆ ಸುಲಿದು ಇಟ್ಟುಕೊಳ್ಳಿ. ನಂತರ ತೆಂಗಿನಕಾಯಿ, ಗೋಡಂಬಿ, ಹಸಿಮೆಣಸಿನಕಾಯಿ, ಜೀರಿಗೆ, ಸೋಂಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದೀಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಪಲಾವ್ ಎಲೆ, ನಕ್ಷತ್ರ ಮೊಗ್ಗು, ಲವಂಗ, ಜೀರಿಗೆ, ಏಲಕ್ಕಿ, ಚಕ್ಕೆ 1 ನಿಮಿಷ ಸೌಟ್‌ನಿಂದ ಆಡಿಸಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. ಬಳಿಕ ಈರುಳ್ಳಿ, ಹಸಿಮೆಣಸಿನ ಹಾಕಿ, ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ನಂತರ ಟೊಮೆಟೊ ಸೇರಿಸಿ, ಖಾರದ ಪುರಿ, ಕಾಳು ಮೆಣಸಿನ ಪುಡಿ, ದನಿಯಾ ಪುಡಿ, ಗರಂ ಮಸಾಲ ಹಾಕಿ ಮಿಕ್ಸ್ ಮಾಡಿ, ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಈಗ ರುಬ್ಬಿದ ತೆಂಗಿನಕಾಯಿ ಮಸಾಲೆ ಹಾಕಿ, ಬೇಕಿದ್ದರೆ ಸ್ವಲ್ಪ ನೀರು ಹಾಕಿ, ನಂತರ ಅರಿಶಿಣ ಪುಡಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ. ಮಿಶ್ರಣ ಕುದಿಯುತ್ತಿರುವಾಗ ಗ್ಯಾಸ್ ಉರಿ ಕಡಿಮೆ ಮಾಡಿ, ಬೇಯಿಸಿದ ಮೊಟ್ಟೆಗಳನ್ನು ಮಸಾಲೆ ಹಿಡಿಯಲು ಮೇಲ್ಮೈನಲ್ಲಿ ಚಾಕುವಿನಿಂದ ಕಟ್ ಮಾಡಿ ಮಸಾಲೆಗೆ ಹಾಕಿ ಒಮ್ಮೆ ನಿಧಾನವಾಗಿ ಮಿಕ್ಸ್ ಮಾಡಿ. ಬಳಿಕ 10 ನಿಮಿಷ ಬೇಯಿಸಿದರೆ ರುಚಿಕರವಾದ ಎಗ್ ಕುರ್ಮಾ ರೆಡಿ.