ಆಲೂ ಕಟ್ಲೆಟ್ ರೆಸಿಪಿ
ಪಾಲಕ್ ಆರೋಗ್ಯಕರ ಆಹಾರ ಮಾತ್ರವಲ್ಲದೆ ಪೋಷಕಾಂಷಗಳಿಂದ ಕೂಡಿದೆ. ರುಚಿಕರವಾದ ಆಲೂ ಕಟ್ಲೆಟ್ ಅನ್ನು ಹೇಗೆ ತಯಾರಿಸುವುದು ನೋಡೋಣ..
ಬೇಕಾಗುವ ಸಾಮಗ್ರಿಗಳು:
ಆಲೂಗಡ್ಡೆ - 2
ಪಾಲಕ್ ಸೊಪ್ಪು - 1 ಬಟ್ಟಲು
ಈರುಳ್ಳಿ - 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
ಜೀರಿಗೆ - ಸ್ವಲ್ಪ
ಗರಂ ಮಸಾಲಾ - 1 ಚಮಚ
ಅರಿಶಿಣ ಪುಡಿ - ಸ್ವಲ್ಪ
ಅಕ್ಕಿಹಿಟ್ಟು - 1 ಚಮಚ
ಮೆಣಸಿನ ಪುಡಿ - 1 ಚಮಚ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ಅಗತ್ಯಕ್ಕೆ ತಕಷ್ಟು
ಮಾಡುವ ವಿಧಾನ:
ಆಲೂಗಡ್ಡೆಯನ್ನು ಬೇಯಿಸಿ ಅದರ ಸಿಪ್ಪೆ ತೆಗೆದು ಇಟ್ಟಿಕೊಳ್ಳಿ. ಬಳಿಕ ಈರುಳ್ಳಿ ಮತ್ತು ಪಾಲಕ್ ಸೊಪ್ಪನ್ನು ತೊಳೆಉ ಸಣ್ಣದಾಗಿ ಹಚ್ಚಿಕೊಳ್ಳಿ. ನಂತರ ಒಂದು ಬಾಣಲೆಗೆ ಬೆಂದಿರುವ ಆಲೂಗಡ್ಡೆಯನ್ನು ಹಾಕಿ ಚೆನ್ನಾಗಿ ಮ್ಯಾಶ್ ಮಾಡಿ. ಬಳಿಕ ಹಚ್ಚಿದ ಈರುಳ್ಳಿ, ಪಾಲಕ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಜೀರಿಗೆ ಗರಂ ಮಸಾಲ, ಅರಿಶಿಣ ಪುಡಿ, ಮೆಣಸಿನ ಪುಡಿ, ಅಕ್ಕಿಹಿಟ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಎಣ್ಣೆ ಕಾದ ಮೇಲೆ ತಯಾರಾದ ಕಟ್ಲೆಟ್ ಮಿಶ್ರಣವನ್ನು ಬೇಕಾದ ಆಕಾರದಲ್ಲಿ ಮಾಡಿಕೊಂಡು ಎಣ್ಣೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಬೇಯಿಸಿಕೊಳ್ಳಿ. ಈಗ ಆಲೂ ಕಟ್ಲೆಟ್ ಸವಿಯಲು ಸಿದ್ದ.