HONNUDIKE: ಹೊನ್ನುಡಿಕೆ ಗ್ರಾಮಸ್ಥರೇ ಎಚ್ಚರ | ನೀವು ಕುಡಿತ್ತಿರೋ ನೀರು ಎಷ್ಟು ಶುದ್ಧ ಇದೆ ಗೊತ್ತಾ..?

ಹೊನ್ನುಡಿಕೆ:

ಇದು ಗ್ರಾಮ ಪಂಚಾಯ್ತಿ ಅಧಿಕಾರಿಗಳ ಬೇಜಾಬ್ದಾರಿಯೋ..? ಗ್ರಾಮಸ್ಥರ ಉಡಾಫೆಯೋ ಆ ದೇವರೇ ಬಲ್ಲ.. ಕಣ್ಣ ಮುಂದೆಯೇ ಸಮಸ್ಯೆ ಕಾಣಿಸ್ತಾ ಇದ್ರು ಕಂಡು ಕಾಣದಂತೆ ಇದ್ದಾರೆ. ಇನ್ನು ಜನರೋ ತಾವು ಕುಡಿತ್ತಾ ಇರೋ ನೀರು ಎಷ್ಟು ಶುದ್ಧವಾಗಿದೇ ಅನ್ನೋದನ್ನ ತಿಳಿದುಕೊಳ್ಳೋ ಪ್ರಯತ್ನನೇ ಮಾಡ್ತಾ ಇಲ್ಲ. ಹೌದು ಚರಂಡಿಯಲ್ಲಿಯೇ ಬೋರ್‌ವೆಲ್‌ ಇದ್ರು ಕೂಡ ಜನರು ಡೋಂಟ್‌ ಕೇರ್‌.. ಅಧಿಕಾರಿಗಳು ಡೋಂಟ್‌ ಕೇರ್‌.. 

ಹೊನ್ನುಡಿಕೆ ಗ್ರಾಮ, ಜನ ಸಂಖ್ಯೆ ಬೆಳೆದಂತೆ ಗ್ರಾಮ ಪಂಚಾಯ್ತಿಯಾಗಿ ಮಾರ್ಪಡುಗೊಂಡಿದೆ. ಈ ಗ್ರಾಮದಲ್ಲಿ ಸುಮಾರು 2 ರಿಂದ ಮೂರು ಸಾವಿರ ಮಂದಿ ಗ್ರಾಮಸ್ಥರು ವಾಸವಾಗಿದ್ದಾರೆ. ಇಲ್ಲಿನ ಜನರಿಗೆ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಬೋರ್‌ವೆಲ್‌ನನ್ನು ತೆಗೆಸಲಾಗಿದ್ದು, ಆ ಬೋರ್‌ವೆಲ್‌ ನಿಂದನೇ ಇಡೀ ಗ್ರಾಮಕ್ಕೆ ಕುಡಿಯುವ ನೀರನ್ನು ಪಂಚಾಯ್ತಿ ಪೂರೈಕೆ ಮಾಡ್ತಿದೆ. ಆದರೆ ಆ ಬೋರ್‌ವೆಲ್‌ ಎಲ್ಲಿದೆ.. ಅದರ ಸ್ಥಿತಿ ಹೇಗಿದೆ ಅಂತಾ ಗ್ರಾಮ ಪಂಚಾಯ್ತಿ ಅವರಿಗೆ ಬಿಟ್ಟರೆ ಮತ್ಯಾರಿಗೂ ತಿಳಿದಿಲ್ಲ. ಹೌದು ಜನರಿಗೆ ಕುಡಿಯುವ ನೀರು ಪೂರೈಸುವ ಬೊರ್‌ವೆಲ್‌ ಚರಂಡಿಯಲ್ಲಿ ಇದ್ದು, ಕಲುಷಿತ ನೀರನ್ನೇ ಜನರಿಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಹೊನ್ನುಡಿಕೆ- ಶಿವಗಂಗೆ ಮಾರ್ಗವಾಗಿ ಇರೋ ಚರಂಡಿಯಲ್ಲಿ ಬೋರ್‌ವೆಲ್‌ನನ್ನು ಕೊರೆಯಲಾಗಿದೆ. ಚರಂಡಿ ಕಟ್ಟಿಕೊಂಡಿದ್ದು, ಕಸ- ಕಡ್ಡಿ ತುಂಬಿ ಹೋಗಿದೆ. ಇದ್ರಿಂದ ದುರ್ನಾತ ಬೀರೋದು ಒಂದ್ಕಡೆ ಆದ್ರೆ.. ಗಲೀಜು ತುಂಬಿದ್ರಿಂದ ಹುಳಗಳು ಉತ್ಪತ್ತಿಯಾಗ್ತಿದ್ದು, ಬೋರ್‌ವೆಲ್‌ನ ಕೇಬಲ್‌ ವೈರ್‌ನಿಂದ ಹುಳಗಳು ಬೋರ್‌ವೆಲ್‌ನ ನೀರಿಗೆ ಸೇರುತ್ತಿದೆ. ಇತ್ತ ಚರಂಡಿ ನೀರು ಅಲ್ಲಿಯೇ ಶೇಖರಣೆಗೊಂಡಿದ್ದರಿಂದ ಅಂರ್ತಜಲಕ್ಕೆ ಕಲುಷಿತ ಸೇರು ಸೇರ್ತಿದೆ. ಇದ್ರಿಂದ ಬೋರ್‌ವೆಲ್‌ ನೀರು ಅಶುದ್ಧವಾಗಿದೆ ಎಂಬ ಆರೋಪ ಕೇಳಿಬಂದಿದೆ, ಇನ್ನು ಜನರಿಗೆ ಕಲುಷಿತ ನೀರು ಪೂರೈಕೆ ಮಾಡಲಾಗ್ತಿದೆ ಅಂತಾ ಗ್ರಾಮ ಪಂಚಾಯ್ತಿ ಅಧಿಕಾರಿಗಳಿಗೆ ಗೊತ್ತಿದ್ರು ಕೂಡ ಕಣ್ಮುಚ್ಚಿ ಕುಳಿತಿರೋದು ಮಾತ್ರ ದುರಂತವೇ ಸರಿ.. ಇನ್ನಾದ್ರು ಅಧಿಕಾರಿಗಳು ಎಚ್ಚೆತ್ತು ಚರಂಡಿಯನ್ನು ಬೇರೆಡೆ ಶಿಫ್ಟ್‌ ಮಾಡಿ, ಜನರ ಆರೋಗ್ಯವನ್ನು ಕಾಪಾಡಬೇಕಿದೆ.

Author:

...
Keerthana J

Copy Editor

prajashakthi tv

share
No Reviews