ದೊಡ್ಡ ಪತ್ರೆ ಎಲೆಆರೋಗ್ಯ-ಜೀವನ ಶೈಲಿ
Health Tips :
ಪ್ರತಿಯೊಬ್ಬರೂ ತಮ್ಮ ಹಿತ್ತಲಲ್ಲಿ ಇಲ್ಲವೇ ಕೈ ತೋಟದಲ್ಲಿ ಸಾಂಬ್ರಾಣಿ ಎಲೆಯನ್ನು ಬೆಳೆಸಿರುತ್ತಿರಿ. ಈ ಗಿಡದ ಪ್ರಯೋಜನೆಗಳು ನಿಮಗೆ ಗೊತ್ತ. ಸಂಜೀವಿನಿ ಗಿಡವಾದ ದೊಡ್ಡ ಪತ್ರೆ ಅಥವಾ ಸಾಂಬ್ರಾಣಿ ಎಲೆಯಲ್ಲಿ ನೀರಿನಂಶ ಹೆಚ್ಚಿದ್ದು, ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.
6 ತಿಂಗಳ ಮಗುವಿನಿಂದ ಹಿಡಿದು 6 ವರ್ಷದ ಮಕ್ಕಳವರೆಗೆ ಶೀತ ಕೆಮ್ಮು ಸಮಸ್ಯೆಗೆ ಈ ಸೊಪ್ಪು ರಾಮಬಾಣ. ಇದನ್ನು ಸ್ವಚ್ಚವಾಗಿ ತೊಳೆದು ಕಾವಲಿಯ ಮೇಲಿಟ್ಟು ಬಿಸಿ ಮಾಡಿ ರಸ ಹಿಂಡಿ ಜೇನುತುಪ್ಪದೊಂದಿಗೆ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು, ಕಫದ ಸಮಸ್ಯೆ ನಿವಾರಣೆಯಾಗುತ್ತದೆ. ಕಂಬಳಿ ಹುಳುವಿನಂಥ ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯನ್ನು ಜಜ್ಜಿ ಉಜ್ಜಿದರೆ ನೋವು ಇಲ್ಲದಂತಾಗುತ್ತದೆ.
ದೊಡ್ಡ ಪತ್ರೆ ಎಲೆಯನ್ನು ಜಜ್ಜಿ ಅದರ ವಾಸನೆಯನ್ನು ಸೇವಿಸಿದರೆ ಕಟ್ಟಿದ ಮೂಗಿನ ಸಮಸ್ಯೆಯಿಂದ ನಿವಾರಣೆ ಹೊಂದಬಹುದು. ಗ್ಯಾಸ್ಟ್ರಿಕ್ ಕೂಡ ಈ ದೊಡ್ಡ ಪತ್ರೆ ಎಲೆಯಿಂದ ದೂರವಾಗುತ್ತದೆ. ರಕ್ತವನ್ನು ಶುದ್ದೀಕರಿಸುತ್ತದೆ. ಚಟ್ನಿ ತಂಬುಳಿ ಮಾಡಿಕೊಂಡು ಕೂಡ ಈ ದೊಡ್ಡ ಪತ್ರೆ ಎಲೆಯನ್ನು ಬಳಸಬಹುದು. ದೊಡ್ಡ ಪತ್ರೆ ಸೊಪ್ಪನ್ನು ಕೊಯ್ದು ತಂದು ಬೆಂಕಿಯಲ್ಲಿ ಸುಟ್ಟು ಅದರ ರಸವನ್ನು ತೆಗದು ಅದಕ್ಕೆ ಅರ್ಧ ಚಮಚ ಬೆಲ್ಲ ಸೇರಿಸಿ ಕುಡಿದರೆ ಒಂದೆ ದಿನದಲ್ಲಿ ಶೀತ, ಕಟ್ಟಿದ ಮೂಗಿನ ಸಮಸ್ಯೆ ನಿವಾರಣೆಯಾಗುತ್ತದೆ.
ದೊಡ್ಡ ಪತ್ರೆ ಸೊಪ್ಪನ್ನು ಬೆಂಕಿಯ ಮೇಲೆ ಇಟ್ಟು ಬಾಡಿಸಿ ನಂತರ ಅದನ್ನು ನೆತ್ತಿಗೆ ಹಾಕಿದರೆ ದೇಹದಲ್ಲಿನ ತಣ್ಣನೆಯ ಅಂಶ ನಿವಾರಣೆಯಾಗಿ ಜ್ವರ, ಶೀತ ಕಡಿಮೆಯಾಗುತ್ತದೆ. ಮಕ್ಕಳಿಗೆ ಇದು ಬೆಸ್ಟ್ ಔಷಧವಾಗಿದೆ. ಒಂದು ವಾರದವರೆಗೆ ದೊಡ್ಡ ಪತ್ರೆಯ ಎಲೆಗಳನ್ನು ತಿಂದರೆ ಅರಿಶಿಣ ಕಾಮಾಲೆ ವಾಸಿಯಾಗುತ್ತದೆ. ದೊಡ್ಡಪತ್ರೆಯನ್ನು ಜೀರಿಗೆ, ಎಳ್ಳಿನೊಂದಿಗೆ ಹುರಿದು ಕಾಯಿತುರಿ ಜೊತೆ ರುಬ್ಬಿ ಅದಕ್ಕೆ ಉಪ್ಪು, ಮಜ್ಜಿಗೆ ಹಾಕಿ ತಂಬುಳಿ ಮಾಡಿ ಕುಡಿದರೆ ಪಿತ್ತದ ಖಾಯಿಲೆಗಳು ಗುಣಮುಖವಾಗುವುದು.