ಹಾಸನ: ಕಾರಿನಲ್ಲಿ ಕುಂಭಮೇಳಕ್ಕೆ ತೆರುಳುತ್ತಿದ್ದಾಗ ಹಾಸನದ ಬಿಜೆಪಿ ಯುವ ಕಾರ್ಯಕರ್ತ ಅಪಘಾತದಲ್ಲಿ ಸಾವು

ಮೃತ ನಿತಿನ್
ಮೃತ ನಿತಿನ್
ಹಾಸನ

ಹಾಸನ:

ಕುಂಭಮೇಳಕ್ಕೆ ತೆರಳುತ್ತಿದ್ದಾಗ ಅಪಘಾತದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ನಿತಿನ್ ಎಂಬ ಯುವಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ ಬಳಿ ನಡೆದಿದೆ.

ಕುಟುಂಬಸ್ಥರ ಜೊತೆ ಕುಂಭಮೇಳಕ್ಕೆ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಿತಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಿತಿನ್ ತಾಯಿ ಪುಷ್ಪ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹಾಸನ ಮೂಲದ  ಮೃತ ನಿತಿನ್ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ. 

 

Author:

share
No Reviews