ಬೆಂಗಳೂರು : ರಾಜ್ಯಪಾಲ ಶ್ರೀ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಜನ್ಮದಿನದ ಸಂಭ್ರಮ

ಬೆಂಗಳೂರು: ಕರ್ನಾಟಕ ರಾಜ್ಯಪಾಲರಾದ ಮಾನ್ಯ ಶ್ರೀ ತಾವರ್‌ ಚಂದ್‌ ಗೆಹ್ಲೋಟ್‌ ಜಿಯವರು ಇಂದು ತಮ್ಮ 77 ನೇ  ಜನ್ಮದಿನವನ್ನು ಆಚರಿಸುತ್ತಿದ್ದಾರೆ. ಈ ವೇಳೆ ರಾಜಕೀಯ ನಾಯಕರು, ನಾಗರಿಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾರ್ವಜನಿಕರ ಕಲ್ಯಾಣ ಮತ್ತು ಸಬಲೀಕರಣಕ್ಕೆ ಜೀವನದಲ್ಲಿ ಅವರು ತೋರಿಸಿರುವ ನಿಷ್ಠೆ, ಸೇವಾಭಾವನೆ ಹಾಗೂ ಸಮಾಜದ ಹಿತಕ್ಕಾಗಿ ನಡೆಸಿದ ಕೆಲಸಗಳು ಎಲ್ಲರಿಗೂ ಪ್ರೇರಣಾದಾಯಕವಾಗಿವೆ. ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಇವರು ಸಾಮಾಜಿಕ ನ್ಯಾಯಕ್ಕಾಗಿ ತೆಗೆದುಕೊಂಡಿರುವ ಬದ್ಧತೆ, ಹಾಗೂ ರಾಜ್ಯಪಾಲರಾಗಿ ನೈತಿಕತೆ ಮತ್ತು ಶಿಸ್ತಿಗೆ ಮಹತ್ವ ನೀಡುವ ನಾಯಕತ್ವ ಎಲ್ಲವೂ ಗಣನೀಯವಾಗಿದೆ.

ಇನ್ನು ಜನ್ಮದಿನದ ಅಂಗವಾಗಿ ರಾಜಭವನದಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Author:

...
Sushmitha N

Copy Editor

prajashakthi tv

share
No Reviews