ಕೊರಟಗೆರೆ :
ಇಂದು ಹನುಮ ಜಯಂತಿಯನ್ನು ರಾಜ್ಯಾದ್ಯಂತ ಶ್ರದ್ದಾ, ಭಕ್ತಿಯಿಂದ ಅದ್ದೂರಿಯಾಗಿ ಆಚರಿಸಲಾಗ್ತಿದೆ. ಎಲ್ಲೆಲ್ಲೂ ಹನುಮನ ಸ್ಮರಣೆಯಲ್ಲಿ ಭಕ್ತರು ಮುಳುಗಿದ್ದು, ಹನುಮನ ಹೆಸರಲ್ಲಿ ಎಲ್ಲೆಲ್ಲೂ ಪಾನಕ ಮಜ್ಜಿಗೆ, ಹೆಸರುಬೆಳೆಯನ್ನು ವಿತರಣೆ ಮಾಡಲಾಯ್ತು. ಕೊರಟಗೆರೆ ತಾಲೂಕಿನ ಕಮನೀಯ ಕ್ಷೇತ್ರ ಎಂದೇ ಪ್ರಖ್ಯಾತಿಯಾಗಿರುವ ಇತಿಹಾಸ ಪ್ರಸಿದ್ದ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ದೇವಾಲಯದಲ್ಲಿ ಹೋಮ, ಹವನ, ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಹನುಮ ಜಯಂತಿ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು, ಇನ್ನು ದೇವಾಲಯಕ್ಕೆ ಆಗಮಿಸಿದ್ದ ನೂರಾರು ಮಂದಿ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಯ್ತು. ಈ ವೇಳೇ ನಾಡಿನಲ್ಲಿ ಸಮೃದ್ಧಿಯಾಗಿ ಮಳೆ ಬೆಳೆ ಆಗಿ ರೈತರು ಸಂತೋಷದಿಂದ ಇರಲೆಂದು ಭಕ್ತಾಧಿಗಳು ಪ್ರಾರ್ಥಿಸಿದರು.