Hair care tips: ಮೆಂತ್ಯ, ದಾಸವಾಳವನ್ನು ಈ ರೀತಿ ಕೂದಲಿಗೆ ಬಳಸಿದ್ರೆ ಕೂದಲು ದಟ್ಟವಾಗಿ ಬೆಳೆಯುತ್ತೆ !

ಉದ್ದವಾದ, ದಟ್ಟವಾದ ಕೂದಲು ಯಾರಿಗೆ ಇಷ್ಟವಿರಲ್ಲ ಹೇಳಿ...? ಕೂದಲು ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾಗಿ ಆರೋಗ್ಯಕರ ಕೂದಲನ್ನು ಹೊಂದಲು ಮಹಿಳೆಯರು ಹಲವಾರು ಬಗೆಯ ದುಬಾರಿ ಹೇರ್ ಪ್ರೊಡಕ್ಟ್ಗಳನ್ನು ಬಳಸುತ್ತಾರೆ. ಆದರೆ ಇದರಿಂದ ಉತ್ತಮ ಫಲಿತಾಂಶ ಸಿಕ್ಕಿದರೂ ಕೂಡ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಹಾಗಾಗಿ ನಿಮ್ಮ ಕೂದಲು ದಟ್ಟವಾಗಿ ಉದ್ದವಾಗಿ, ಆರೋಗ್ಯಕರವಾಗಿ ಬೆಳೆಯಲು ಆಯುರ್ವೇದದಲ್ಲಿ ತಿಳಿಸಿದಂತೆ ಮೆಂತ್ಯ ಮತ್ತು ದಾಸವಾಳವನ್ನು ಈ ರೀತಿಯಲ್ಲಿ ಬಳಸಿ.

ಮೆಂತ್ಯ ಮತ್ತು ದಾಸವಾಳ ಆರೋಗ್ಯಕರ ಕೂದಲನ್ನು ಹೊಂದಲು ಆಯುರ್ವೇದದಲ್ಲಿ ಬಳಸುವ ಎರಡು ಪ್ರಮುಖ ಪದಾರ್ಥಗಳಾಗಿವೆ. ನೆತ್ತಿಯ ಪೋಷಣೆ, ಕೂದಲಿನ ಬೆಳವಣಿಗೆ, ಕೂದಲಿನ ಬುಡವನ್ನು ಗಟ್ಟಿಗೊಳಿಸುವುದು ಹೀಗೆ ಒಟ್ಟಾರೆ ಕೂದಲಿನ ಆರೋಗ್ಯಕ್ಕಾಗಿ ಅವುಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ.

3 ಟೇಬಲ್ ಚಮಚ ಮೆಂತ್ಯವನ್ನು ರಾತ್ರಿಯಿಡೀ ಸ್ವಲ್ಪ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ, ಈ ಬೀಜಗಳನ್ನು ಅದೇ ನೀರಿನೊಂದಿಗೆ ರುಬ್ಬಿ ಪೇಸ್ಟ್ ಮಾಡಿ. ನಿಮ್ಮ ಕೂದಲಿಗೆ ಎಣ್ಣೆ ಹಚ್ಚಿದ ನಂತರ, ಈ ಪೇಸ್ಟ್ ಅನ್ನು ಇಡೀ ನೆತ್ತಿ ಮತ್ತು ಕೂದಲಿನ ಉದ್ದಕ್ಕೆ ಹಚ್ಚಿ ಮತ್ತು ಶವರ್ ಕ್ಯಾಪ್ನಿಂದ ಮುಚ್ಚಿ. ಇದನ್ನು ಸುಮಾರು ಮೂವತ್ತು ನಿಮಿಷಗಳ ಕಾಲ ಬಿಡಿ ಮತ್ತು ಹರ್ಬಲ್ ಶಾಂಪೂ ಅಥವಾ ಹೇರ್ ಪೌಡರ್ ಬಳಸಿ ಕೂದಲನ್ನು ತೊಳೆಯಿರಿ. ಅಗತ್ಯವಿದ್ದರೆ ಕಂಡೀಷನರ್ ಕೂಡ ಹಚ್ಚಬಹುದು. ನಂತರ ಟವೆಲ್ನಿಂದ ಕೂದಲನ್ನು ಒರೆಸಿಕೊಂಡು ಒಣಗಿಸಿ ನಂತರ ಅಗಲವಾದ ಹಲ್ಲಿನ ಬೇವಿನ ಬಾಚಣಿಗೆಯನ್ನು ಬಳಸಿ ಕೂದಲನ್ನು ಬಾಚಿಕೊಳ್ಳಿ.

ಒಂದು ಚಮಚ ಮೆಂತ್ಯ ಬೀಜಗಳನ್ನು ರಾತ್ರಿಯಿಡೀ ನೆನೆಸಿಡಿ. ಮರುದಿನ ನೆನೆಸಿದ ಮೆಂತ್ಯ ಬೀಜಗಳಲ್ಲಿ ಕೆಲವು ದಾಸವಾಳದ ಹೂವುಗಳು ಮತ್ತು ಎಲೆಗಳನ್ನು ಸೇರಿಸಿ ನಯವಾದ ಪೇಸ್ಟ್ ತಯಾರಿಸಿ. ಇದನ್ನು ಕೂದಲಿಗೆ ಹಚ್ಚಿ ಒಣಗಿದ ಬಳಿಕ ತೊಳೆಯಿರಿ. ಅದ್ಭುತ ಫಲಿತಾಂಶಕ್ಕಾಗಿ ವಾರಕ್ಕೊಮ್ಮೆ ಈ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ.

ಈ ರೀತಿಯಲ್ಲಿ ಮನೆಯಲ್ಲಿಯೇ ಸುಲಭವಾಗಿ ಸಿಗುವಂತಹ ಮೆಂತ್ಯಕಾಳು ಮತ್ತು ದಾಸವಾಳದ ಎಲೆಗಳು ಮತ್ತು ಹೂಗಳನ್ನು ಬಳಸಿ ನಿಮ್ಮ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ. ಇದರಿಂದ ಉದ್ದವಾದ, ನಯವಾದ ಆರೋಗ್ಯಕರವಾದ ಕೂದಲು ನಿಮ್ಮದಾಗುತ್ತದೆ.

Author:

...
Editor

ManyaSoft Admin

Ads in Post
share
No Reviews