Hair care tips: ಕೂದಲಿನ ಸಮಸ್ಯೆಗೆ ಇಲ್ಲಿದೆ ಸುಲಭ ಮನೆಮದ್ದು

Hair care Tips:

ಪ್ರತಿಯೊಬ್ಬರು ಅವರ ಕೂದಲು ಕಪ್ಪಾಗಿ, ದಪ್ಪವಾಗಿ, ಮೃದುವಾಗಿ ಮತ್ತು ಉದ್ದವಾಗಿ ಬೆಳೆಯಬೇಕೆಂದರೆ ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ. ಸುಂದರ ಮತ್ತು ಉದ್ದದ ಕೂದಲು ಹೊಂದಬೇಕೆಂಬುದು ಹೆಚ್ಚಿನವರ ಬಯಕೆ. ಆದರೆ ಇದಕ್ಕೆ ಕೂದಲು ಉದುರುವಿಕೆ, ಸರಿಯಾಗಿ ಬೆಳೆಯದಿರುವುದು ಅಡ್ಡಿಯಾಗುತ್ತದೆ. ಇಲ್ಲಿ ನೀಡಿರುವ ನೈಸರ್ಗಿಕ ಸಲಹೆಗಳನ್ನು ಪಾಲಿಸಿದರೆ ಕೂದಲು ಬೆಳವಣಿಗೆಯ ವೇಗ ಹೆಚ್ಚುತ್ತದೆ.

1 ಈರುಳ್ಳಿಯನ್ನು ಕಟ್‌ ಮಾಡಿಕೊಳ್ಳಿ. ನಂತರ ಮಿಕ್ಸಿ ಜಾರಿಗೆ ಈರುಳ್ಳಿ ಮತ್ತು ಸ್ವಲ್ಪ ಆಲೋವೆರಾ ಜೆಲ್ ಹಾಕಿ ಮತ್ತು ನೀರು ಹಾಕದ ಹಾಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ರುಬ್ಬಿರುವ ಮಿಶ್ರಣವನ್ನು ರಸ ಬರುವಹಾಗೆ ಸೋಸಿಕೊಳ್ಳಿ. ಬಳಿಕ ತಲೆಯ ಬುಡಕ್ಕೆ ಈ ರಸವನ್ನು ಹಚ್ಚಿಕೊಂಡು ಎರಡು ಗಂಟೆಗಳ ಕಾಲ ಬಿಟ್ಟು ತೊಳೆಯಿರಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿ ಇದರಿಂದ ಕೂದಲು ದಟ್ಟವಾಗಿ, ಉದ್ದವಾಗಿ, ಆರೋಗ್ಯಕರವಾಗಿ ಬೆಳೆಯುತ್ತದೆ. ಇದರಿಂದ ಡ್ಯಾಂಡ್ರಫ್‌ ಸಮಸ್ಯೆ ನಿವಾರಣೆಯಾಗುತ್ತದೆ. ಮತ್ತು ಮೃದುವಾದ ಕೂದಲು ನಿಮ್ಮದಾಗುತ್ತದೆ.

Author:

...
Editor

ManyaSoft Admin

Ads in Post
share
No Reviews