ಗುಬ್ಬಿ : ಬೈಕ್ ನಲ್ಲಿ ಪ್ರಯಾಗ್ ರಾಜ್ ಯಾತ್ರೆ ಪೂರೈಸಿದ ಗುಬ್ಬಿಯ ಯುವಕ

ಬೈಕ್‌ ನಲ್ಲಿ ಪ್ರಯಾಗ್‌ ರಾಜ್‌ ಗೆ ತೆರಳಿದ ಯುವಕನಿಗೆ ಸನ್ಮಾನ ಮಾಡಿರುವುದು.
ಬೈಕ್‌ ನಲ್ಲಿ ಪ್ರಯಾಗ್‌ ರಾಜ್‌ ಗೆ ತೆರಳಿದ ಯುವಕನಿಗೆ ಸನ್ಮಾನ ಮಾಡಿರುವುದು.
ತುಮಕೂರು

ಗುಬ್ಬಿ:

ಪ್ರಯಾಗ್ ರಾಜ್‌ ಯಾತ್ರೆಗೆ ತೆರಳಿದ್ದ ಗುಬ್ಬಿಯ ಯುವಕ ಚಿಕ್ಕೇಗೌಡ, 7 ದಿನಗಳ ಕಾಲ ಪ್ರವಾಸ ಮುಗಿಸಿ ಗುರುವಾರ ಮರಳಿ ಗುಬ್ಬಿಗೆ ವಾಪಸ್‌ ಬಂದಿದ್ದಾರೆ. ಬೈಕ್‌ನಲ್ಲಿ ಪ್ರವಾಸ ಕೂಗೊಂಡ ಯುವಕ ಚಿಕ್ಕೇಗೌಡಗೆ ನಾಗರೀಕರು ಸನ್ಮಾನ ಮಾಡಿದರು. ಈ  ವೇಳೆ  ಪಟ್ಟಣ ಪಂಚಾಯ್ತಿಯ ಮಾಜಿ ಸದಸ್ಯ ವಿಜಯ್ ಕುಮಾರ್, ಮುಖಂಡ ಲೋಕೇಶ್, ರಮೇಶ್‌ ಗೌಡ, ಕಿರಣ್, ಸುರೇಶ್, ಮಲ್ಲಿಕ್, ಪತಂಜಲಿ ಬಸವರಾಜು ಸೇರಿ ಹಲವರು ಭಾಗಿಯಾಗಿದ್ದರು.

ಫೆಬ್ರವರಿ 21ರಂದು ಮುಂಜಾನೆ ಬಜಾಜ್‌ ಪಲ್ಸರ್‌ ಬೈಕ್‌ನಲ್ಲಿ ಪ್ರಯಾಗ್‌ ರಾಜ್‌ನತ್ತ ಪ್ರಯಾಣ ಬೆಳೆಸಿದ್ದ ಯುವಕ ಚಿಕ್ಕೇಗೌಡ. ನಿತ್ಯ 700 ಕಿಲೋ ಮೀಟರ್‌ ಪ್ರಯಾಣ ಮಾಡಿ ಮೂರು ದಿನಗಳಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ ತಲುಪಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಮತ್ತೆ ಮೂರು ದಿನ ಪ್ರಯಾಣ ಮಾಡಿ ವಾಪಸ್‌ ಗುಬ್ಬಿಗೆ ಬಂದಿದ್ದಾರೆ.  

ಇನ್ನು ಯುವಕನ ಸಾಹಸ ಮೆಚ್ಚಿದ ಗುಬ್ಬಿ ನಾಗರೀಕ ತಂಡ ಚಿಕ್ಕೇಗೌಡ ಅವರಿಗೆ ಪಟ್ಟಣದ ಜವಳಿಪೇಟೆ ಗಣೇಶ ದೇವಾಲಯದ ಬಳಿ ಸನ್ಮಾನಿಸಿ ಗೌರವಿಸಲಾಯಿತು. ಪ್ರವಾಸ ಯಶಸ್ವಿಯಾಗಿ ಪೂರೈಸಿ ಮರಳಿ ತವರೂರಿಗೆ ಬಂದ ಚಿಕ್ಕೇಗೌಡ ಧೂಳನಹಳ್ಳಿ ಗ್ರಾಮದವರು. ನಾಲ್ಕು ರಾಜ್ಯ ದಾಟಿ ಉತ್ತರ ಪ್ರದೇಶ ತಲುಪಿ ಮರಳಿ ಒಟ್ಟು 4,200 ಕಿಮೀ ಪ್ರಯಾಣ ರೋಮಾಂಚನ ಎನಿಸಿತ್ತು. ವಾಹನ ದಟ್ಟಣೆ ನಡುವೆ 150 ಕಿಮೀ ಟ್ರಾಫಿಕ್ ಜಾಮ್ ಆಗಿತ್ತು. ಬೈಕ್ ಸವಾರಿ ಕಾರಣ ನುಸುಳಿ ಪ್ರಯಾಗ್ ರಾಜ್ ತಲುಪಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದು ಸಾರ್ಥಕ ಭಾವನೆ ತಂದಿತ್ತು ಎಂದು ಅನುಭವ ಹಂಚಿಕೊಂಡರು.

Author:

...
Editor

ManyaSoft Admin

Ads in Post
share
No Reviews