ಗುಬ್ಬಿ:
ಗುಬ್ಬಿ ತಾಲೂಕಿನ ಚೇಳೂರು ಹೋಬಳಿಯ ಗೌರಿಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ನೂತನ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನಾ ಮಾಡಲಾಯಿತು. ಈ ವೇಳೆ ಶಾಸಕ ಎಸ್.ಆರ್ ಶ್ರೀನಿವಾಸ್, ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸಾವಿರಾರು ಭಕ್ತರು ಭಾಗಿಯಾಗಿದ್ದರು.
ದೇಗುಲದ ರಾಜಗೋಪುರ ಪ್ರತಿಷ್ಠಾಪನೆಯಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಎಸ್. ಆರ್ ಶ್ರೀನಿವಾಸ್ ಪ್ರತಿಯೊಬ್ಬರೂ ಹುಟ್ಟು ಸಾವಿನ ಮಧ್ಯೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿ ನೆನೆಪಿನಲ್ಲಿ ಉಳಿಯುವ ಕೆಲಸ ಮಾಡಬೇಕು. ಅಲ್ಲದೇ ಬುದ್ದ ಬಸವಣ್ಣರ ಆದರ್ಶಗಳು ಸಮಾಜಕ್ಕೆ ಉತ್ತಮ ಕೊಡುಗೆಯಾಗಿದ್ದು, ಅದೇ ರೀತಿಯಾಗಿ ನಾವು ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಇನ್ನು ಬೆಟ್ಟದ ಹಳ್ಳಿ ಗವಿ ಮಠದ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಮಾತನಾಡಿ, ತನ್ನಲ್ಲಿ ತಾನು ದೈವ ಕಾಣು ಎಂಬಂತೆ ಮನುಷ್ಯನಲ್ಲಿ ಆತ್ಮವೂ ದೇವರಿದ್ದಂತೆ ಬಸವಣ್ಣನವರು ಹೇಳಿರೋ ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸ ಎಂಬಂತೆ ಮನುಷ್ಯರು ತನ್ನಲ್ಲಿ ದೇವರನ್ನು ಕಾಣಬೇಕು, ಅಲ್ಲದೇ ಹಣ, ಐಶ್ವರ್ಯ, ಆಡಂಬರದಿಂದ ಏನನ್ನು ಗಳಿಸಲು ಸಾಧ್ಯವಿಲ್ಲ ಎಂದರು.