ಗುಬ್ಬಿ : ಗುಬ್ಬಿಯಪ್ಪನ ಸನ್ನಿಧಾನ ಶೀಘ್ರವೇ ಪ್ರವಾಸೋದ್ಯಮ ಕ್ಷೇತ್ರ ಆಗಲಿದೆ

ಗುಬ್ಬಿ :

ಐತಿಹಾಸಿಕ ಸುಪ್ರಸಿದ್ಧ ದೇವಾಲಯವಾದ ಗುಬ್ಬಿಯ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಾರ್ಚ್‌ 5 ರಿಂದ 23ರವರೆಗೆ ಜರುಗುತ್ತಿದ್ದು, ಇಂದು ಗುಬ್ಬಿಯಪ್ಪನ ಸನ್ನಿಧಾನಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ ಹಾಲಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಮುರಳೀಧರ ಹಾಲಪ್ಪ ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಗುಬ್ಬಿಯಪ್ಪನ ಜಾತ್ರಗೆ ತಪ್ಪದೇ ಬರುತ್ತೇನೆ. ರಥೋತ್ಸವ ಸೇರಿದಂತೆ ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಬರುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡರು.

ಗುಬ್ಬಿಯಪ್ಪನ ದೇವಾಲಯದ ಆವರಣದಲ್ಲಿ ಹಲವು ವರ್ಷಗಳಿಂದಲೂ ನಿರ್ಮಾಣ ಹಂತ ನೆನೆಗುದ್ದಿಗೆ ಬಿದ್ದಿದೆ. ಈ ಬಗ್ಗೆ ಗುಬ್ಬಿ ಶಾಸಕರ ಗಮನಕ್ಕೆ ಈ ವಿಚಾರವನ್ನು ತಂದಿದ್ದೇನೆ ಅವರು ಸ್ಪಂದಿಸುವ ಬಗ್ಗೆ ತಿಳಿಸಿದ್ದಾರೆ. ಅಲ್ಲದೇ ಒಮ್ಮೆ ದೇವಾಲಯಕ್ಕೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಅವರನ್ನು ಕರೆಸಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಯತ್ನ ಮಾಡುತ್ತೇವೆ. ಈ ಸನ್ನಿಧಾನ ಶೀಘ್ರವೇ ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Author:

...
Editor

ManyaSoft Admin

Ads in Post
share
No Reviews