ಇಂಗ್ಲೆಂಡ್ ತಂಡ ಭಾರತಕ್ಕೆ ಗೆಲ್ಲಲು 133 ರನ್ಗಳ ಗುರಿ ನೀಡಿತ್ತು. ಅದನ್ನು ಟೀಂ ಇಂಡಿಯಾ ಸುಲಭವಾಗಿ ಸಾಧಿಸಿತು. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಂದ್ಯದ ನಂತರ ನಾಯಕ ಸೂರ್ಯ ವರುಣ್ ಮತ್ತು ಅರ್ಷದೀಪ್ ಅವರನ್ನು ಹೊಗಳಿದರು.
ಪಂದ್ಯ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ನಾವು ಸ್ವಲ್ಪ ವಿಭಿನ್ನವಾಗಿ ಆಡಲು ಬಯಸುತ್ತೇವೆ. ಬೌಲರ್‌ಗಳು ಪ್ಲಾನ್ ರೂಪಿಸಿ ಸರಿಯಾಗಿ ಅನುಷ್ಠಾನ ಮಾಡಿದರು. ದಕ್ಷಿಣ ಆಫ್ರಿಕಾ ಸರಣಿಯಲ್ಲೂ ನಾವು ಅದೇ ರೀತಿ ಮಾಡಿದ್ದೇವೆ. ಹೊಸ ಬಾಲ್ ಅನ್ನು ಎಸೆಯುವ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ತೆಗೆದುಕೊಂಡರು. ವರುಣ್ ಚಕ್ರವರ್ತಿ ತಯಾರಿ ಚೆನ್ನಾಗಿದೆ. ಅವರು ನಮ್ಮ ಹೋರಾಟವನ್ನು ಸಿಂಪಲ್ ಮಾಡಿದರು. ಇದೇ ಕಾರಣಕ್ಕೆ ಅವರು ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಎಂದರು.
ತಂಡದಲ್ಲಿ ಅರ್ಷದೀಪ್ ಸಿಂಗ್ ಹೆಚ್ಚುವರಿ ಜವಾಬ್ದಾರಿ ವಹಿಸುತ್ತಿದ್ದಾರೆ. ಪಂದ್ಯಗಳಲ್ಲಿ ಅವರಿಗೆ ಸಿಕ್ಕಿರುವ ಅನುಭವಗಳಿಂದ ಬಹಳಷ್ಟು ಕಲಿಯುತ್ತಿದ್ದಾರೆ. ಗೌತಿ ಭಾಯ್ (ಗೌತಮ್ ಗಂಭೀರ್) ಸಾಕಷ್ಟು ಸ್ವಾತಂತ್ರ್ಯ ನೀಡುತ್ತಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ನಾವು ಮಾಡಿದ್ದಕ್ಕಿಂತ ಸ್ವಲ್ಪ ವಿಭಿನ್ನವಾಗಿ ಆಡಲು ಬಯಸುತ್ತೇವೆ ಎಂದರು.
ಭಾರತ ತಂಡಕ್ಕೆ ಓಪನಿಂಗ್ ಮಾಡಲು ಬಂದಿದ್ದ ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ನಂತರ 34 ಎಸೆತಗಳಲ್ಲಿ 79 ರನ್ ಗಳಿಸಿದರು. ಐದು ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. ಪರಿಣಾಮ ಭಾರತ ತಂಡ 43 ಎಸೆತಗಳು ಬಾಕಿ ಇರುವಾಗಲೇ ಗುರಿ ಬೆನ್ನಟ್ಟಿತ್ತು.