ಗುಬ್ಬಿ: ಶ್ರೀ ಬಿದ್ದ ಹನುಮಂತರಾಯ ಸ್ವಾಮಿ ದೇವಾಲಯದಲ್ಲಿ ಅದ್ದೂರಿ ಶ್ರೀ ರಾಮನವಮಿ ಆಚರಣೆ

ಶ್ರೀ ಬಿದ್ದ ಹನುಮಂತರಾಯ ಸ್ವಾಮಿ ದೇವಾಲಯ
ಶ್ರೀ ಬಿದ್ದ ಹನುಮಂತರಾಯ ಸ್ವಾಮಿ ದೇವಾಲಯ
ತುಮಕೂರು

ಗುಬ್ಬಿ:

ಇಂದು ನಾಡಿನಾದ್ಯಂತ ಶ್ರೀ ರಾಮನವಮಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸ್ತಿದ್ದು, ಗುಬ್ಬಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಬಿದ್ದ ಹನುಮಂತರಾಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮನವಮಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು, ಇನ್ನು ಮುಂಜಾನೆಯಿಂದಲೇ ದೇವಾಲಯದಲ್ಲಿ ಹೋಮ, ಹವನ, ಅಭಿಷೇಕ ಸೇರಿದಂತೆ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಲಾಯಿತು.

ಪ್ರತಿ ವರ್ಷದಂತೆ ಈ ವರ್ಷವೂ ರಾಮನವಮಿ ಹಬ್ಬದ ಪ್ರಯುಕ್ತ ಶ್ರೀ ಬಿದ್ದ ಹನುಮಂತರಾಯ ಸ್ವಾಮಿಗೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿಲಾಗಿತ್ತು, ಇನ್ನು ದೇವಾಲಯಕ್ಕೆ ಆಗಮಿಸಿದ್ದ ನೂರಾರು ಮಂದಿ ಭಕ್ತರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ವಿವಿಧ ಬಗೆಯ ಖಾದ್ಯಗಳನ್ನ ತಯಾರಿಸಿ ವಿತರಿಸಲಾಯಿತು.

Author:

share
No Reviews