ಕೊಪ್ಪಳ : ಓವರ್‌ ಟೇಕ್‌ ಮಾಡಲು ಹೋಗಿ ಪ್ರಾಣವನ್ನೇ ತೆಗೆದ ಸರ್ಕಾರಿ ಬಸ್‌ ಚಾಲಕ..!

ಮೃತ ವ್ಯಕ್ತಿ ಮಂಜುನಾಥ್
ಮೃತ ವ್ಯಕ್ತಿ ಮಂಜುನಾಥ್
ಕೊಪ್ಪಳ

ಕೊಪ್ಪಳ: 

ಓವರ್‌ ಟೆಕ್‌ ಮಾಡಲು ಹೋಗಿ ಬೈಕ್‌ ಗೆ ಸರ್ಕಾರಿ ಬಸ್‌ ಡಿಕ್ಕಿಯಾದ ಪರಿಣಾಮ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ್ದು, ಇನ್ನೊರ್ವನ ಗಂಭೀರ ಗಾಯವಾಗಿರುವ ಘಟನೆ ಇಂದು ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮರ್ಲಾನಹಳ್ಳಿ ಬಳಿ ಸಿದ್ದಾಪುರ ನಿವಾಸಿ ಮಂಜುನಾಥ್‌ ಹಾಗೂ ಖಾಸಿಂ ಸಾಬ್‌ ಬೈಕ್ ನಲ್ಲಿ ಹೋಗುತ್ತಿದ್ದರು, ಈ ವೇಳೆ ಸರ್ಕಾರಿ ಬಸ್‌ ಚಾಲಕ ಕಾರನ್ನು ಓವರ್‌ ಟೇಕ್‌ ಮಾಡಲು ಹೋಗಿ ಎದುರಿಗಿದ್ದ ಬೈಕ್‌ ಗೆ ಡಿಕ್ಕಿ ಹೊಡೆದಿದ್ದಾನೆ, ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು ಕಾರಟಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರಿ ಬಸ್‌ ಚಾಲಕನ ಅಜಾಗರುಕತೆಯಿಂದ ಈ ಅಪಘಾತ ಸಂಭವಿಸಿದ್ದು, ಮೃತನನ್ನು ಸಿದ್ದಾಪುರ ನಿವಾಸಿ ಎಂದು ಗುರುತಿಸಳಾಗಿದೆ. ಘಟನಾ ಸ್ಥಳಕ್ಕೆ ಕಾರಟಗಿ ಪೊಲೀಸ್‌ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Author:

...
Editor

ManyaSoft Admin

Ads in Post
share
No Reviews