ದೇಶ : ದೇಶದ ಜನತೆಗೆ ಹೆದ್ದಾರಿ ಟೋಲ್ ಸಂಗ್ರಹದ ಜಂಜಾಟದಿಂದ ಮುಕ್ತಿ ನೀಡಲು ಕೇಂದ್ರ ಸರ್ಕಾರದಿಂದ ಬಿಗ್ ರೀಲೀಫ್ ಘೋಷಿಸಲಾಗಿದೆ. ನಿರಂತರವಾಗಿ ಟೋಲ್ ಕಟ್ಟಿ ಬೇಸತ್ತ ವಾಹನ ಸವಾರರಿಗೆ ಇದೇ ಆಗಸ್ಟ್ 15, 2025 ರಿಂದ ವಾರ್ಷಿಕ ಫಾಸ್ಟ್ ಟ್ಯಾಗ್ ಪಾಸ್ ಸೌಲಭ್ಯವನ್ನು ಒದಗಿಸಲು ನಿರ್ಧಾರವಾಗಿದೆ.
ಸರ್ಕಾರದ ಹೊಸ ಯೋಜನೆಯ ಪ್ರಕಾರ, ವಾರ್ಷಿಕ ₹3,000 ಟೋಲ್ ಪಾಸ್ ಪಡೆದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದು ವರ್ಷ ಅವಧಿಗೆ ನಿರ್ಬಂಧವಿಲ್ಲದೇ ಸಂಚಾರ ಮಾಡಬಹುದಾಗಿದೆ. ಈ ಪಾಸ್‌ನ್ನು ಫಾಸ್ಟ್ ಟ್ಯಾಗ್ ವ್ಯವಸ್ಥೆ ಮೂಲಕಲೇ ಜಾರಿ ಮಾಡಲಾಗುತ್ತದೆ, ಎಂದರೆ ಟೋಲ್ ಗೇಟ್‌ಗಳಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ.
ಪ್ರಮುಖ ಅಂಶಗಳು:
*ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಟೋಲ್ ಪಾಸ್ ಜಾರಿಗೆ
*ಆರಂಭ ದಿನಾಂಕ: ಆಗಸ್ಟ್ 15, 2025
*ವಾರ್ಷಿಕ ಶುಲ್ಕ: ₹3,000
*ಸೌಲಭ್ಯ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಿಯಮಿತ ಪ್ರಯಾಣ
ಈ ಕ್ರಮದಿಂದ ದೇಶದಲಿರುವ ಲಕ್ಷಾಂತರ ವಾಹನ ಸವಾರರಿಗೆ ಅಭೂತಪೂರ್ವ ಸಹಾಯವಾಗಲಿದೆ ಎನ್ನಲಾಗುತ್ತಿದೆ. ಇನ್ನು ಮುಂದೆ ಪ್ರತಿ ಪ್ರಯಾಣಕ್ಕೂ ಟೋಲ್ ಪಾವತಿಸಬೇಕಾದ ಅನಿವಾರ್ಯತೆ ಕಡಿಮೆಯಾಗಲಿದ್ದು, ಸಮಯ ಹಾಗೂ ಹಣದ ಉಳಿತಾಯವೂ ಸಾಧ್ಯವಾಗಲಿದೆ.