ಮಾಜಿ ಶಾಸಕ ದಿವಂಗತ ಬಿ.ಬೈರಪ್ಪಾಜಿ ಸ್ಮರಣಾರ್ಥ ಉಚಿತ ಆರೋಗ್ಯ ಶಿಬಿರ ಆಯೋಜನೆ

ನಿರ್ಮಾಲಾನಂದನಾಥ ಸ್ವಾಮೀಜಿ
ನಿರ್ಮಾಲಾನಂದನಾಥ ಸ್ವಾಮೀಜಿ
ತುಮಕೂರು

ತುರುವೇಕೆರೆ ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ಬಳಿ ಮಾಜಿ ಶಾಸಕ ದಿವಂಗತ ಬಿ.ಬೈರಪ್ಪಾಜಿ ಸ್ಮರಣಾರ್ಥ ಭಾನುವಾರ ಬಿ.ಬೈರಪ್ಪಾಜಿ ಪ್ರತಿಷ್ಠಾನ, ಆದಿಚುಂಚನಗಿರಿ ಆಸ್ಪತ್ರೆ, ಕಾಲಬೈರವ ಆಯುರ್ವೇದ ಆಸ್ಪತ್ರೆ, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಶ್ರೀ ರಂಗ ಆಸ್ಪತ್ರೆ, ಕುಮಾರ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ಪೀಠಾದ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು.

ಆದಿಚುಂಚನಗಿರಿ ಮಠದ ಪೀಠಾದ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಮಾತನಾಡಿ ಮಾಜಿ ಶಾಸಕ ದಿ. ಬೈರಪ್ಜಾಜಿ ಜನ ಸಾಮಾನ್ಯರ ಸೇವೆ ಮಾಡುವ ಮೂಲಕ ಇಂದಿನ ಯುವ ಶಾಸಕರಿಗೆ ಮಾದರಿಯಾಗಿದ್ದಾರೆ ಹಾಗೂ ಶಾಸಕರಾಗಿ ತಾಲೂಕಿನ ಜನರ ಸೇವೆ ಮಾಡುವ ಮೂಲಕ ತಾಲ್ಲೂಕಿನ  ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಗ್ರಾಮೀಣ ಜನರಿಗೆ ನೀಡುವಂತಹ ಮೂಲಭೂತ ಸೌಕರ್ಯ ಜೊತಗೆ ಜನರನ್ನು ಜಾಗೃತಿ ಗೊಳಿಸಿದ್ದಾರೆ, ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಮೂಲಕ ಗ್ರಾಮೀಣ ಭಾಗದಲ್ಲಿ ಯುವಕರನ್ನು  ವಿದ್ಯಾವಂತರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂದಿನ ಜನಪ್ರತಿನಿಧಿಗಳು ಅವರ ಅದರ್ಶಗಳನ್ನು ಮೈಗೂಡಿಸಿಕೊಂಡು ರಾಜಕಾರಣ ಮಾಡಬೇಕು ಎಂದು ಸಲಹೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಇಂತಹ ಆರೋಗ್ಯ ಶಿಬಿರಗಳು ಹೆಚ್ಚು ಹಮ್ಮಿಕೊಳ್ಳಬೇಕು. ಗ್ರಾಮೀಣದ ರೈತಾಪಿ ವರ್ಗದ ಜನರು ತಮ್ಮ ಕೃಷಿ ಚಟುವಟಿಕೆಗಳ ಒತ್ತಡದ ನಡುವೆ ಆರೋಗ್ಯದ ಕಡೆ ಗಮನ ನೀಡಬೇಕು. ಜನರು ಸಂಕೋಚ ಬಿಟ್ಟು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಇಂತಹ ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಮಸಾಲ ಜಯರಾಮ್, ಬೈರಪ್ಪಾಜಿ ಪ್ರತಿಷ್ಠಾನ ಅಧ್ಯಕ್ಷ ಕೆ.ಟಿ.ಗಂಗಾಧರ್,   ಗ್ರಾಮ ಪಂಚಾಯತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಸುರೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಚೌದ್ರಿ ರಂಗಪ್ಪ, ಎನ್.ಆರ್.ಜಯರಾಮ್ ಮುಂತಾದವರು ಉಪಸ್ಥಿತರಿದ್ದರು.

Author:

...
Editor

ManyaSoft Admin

Ads in Post
share
No Reviews