ಚಿತ್ರದುರ್ಗ : ಟ್ರಾಕ್ಟರ್ ಗೆ ಕಾರು ಡಿಕ್ಕಿಯಾಗಿ ಭೀಕರ ಅಫಘಾತ ಸಂಭವಿಸಿದ್ದು, 11 ತಿಂಗಳ ಗಂಡು ಮಗು ಹಾಗೂ 2 ವರ್ಷದ ಹೆಣ್ಣು ಮಗು ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಅರೇಹಳ್ಳಿ ಗ್ರಾಮದ ಗಂಗಮ್ಮ (60), ಕಾವ್ಯ (30), ಹನ್ಸಿಕಾ (2) ಹಾಗೂ 11 ತಿಂಗಳ ಗಂಡು ಮೃತ ದುರ್ದೈವಿಗಳಾಗಿದ್ದಾರೆ.
ಚಿತ್ರಹಳ್ಳಿ ಶಿವಗಂಗಾ ಪೆಟ್ರೋಲ್ ಬಂಕ್ ಬಳಿ ಹೊಳಲ್ಕೆರೆ ಕಡೆಗೆ ಚಲಿಸುತ್ತಿದ್ದ ಟ್ರಾಕ್ಟರ್ ಗೆ ವೇಗವಾಗಿ ಬಂದ ಕಾರು ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದಿದೆ. ಇನ್ನು ಟ್ರಾಕ್ಟರ್ ಗೆ ಯಾವುದೇ ರಿಪ್ಲೆಕ್ಟರ್ ಇರಲಿಲ್ಲ, ಇದ್ರಿಂದ ಕಾರು ಚಾಲನೆ ಮಾಡ್ತಿದ್ದ ಯಶವಂತ್ ಎಂಬಾತನಿಗೆ ಏನೂ ಕಾಣಿಸಿದ ಪರಿಣಾಮ ಕಾರು ಟ್ರಾಕ್ಟರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಇನ್ನು ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪಿದರೆ, ಕಾರು ಚಾಲನೆ ಮಾಡ್ತಿದ್ದ ಯಶವಂತ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಬಂಧ ಚಿತ್ರಹಳ್ಳಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.