ಚಿಯಾ ಬೀಜ ತೂಕ ಇಳಿಕೆಗೆ ತುಂಬಾ ಪ್ರಯೋಜನಕಾರಿಯಾಗಿದೆ.ಚಿಯಾ ಬೀಜಗಳನ್ನು ಬಳಸಿಕೊಂಡು ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಈ ಚಿಯಾಬೀಜಗಳಿಂದ ಆರೋಗ್ಯಕ್ಕೆ, ತ್ವಚೆಗೆ ಸಾಕಷ್ಟು ಪ್ರಯೋಜನವಿದೆ. ಚಿಯಾ ಬೀಜವನ್ನು ನಾವು ಪಾನೀಯಗಳಲ್ಲಿ ಸೇವಿಸಿರುತ್ತೇವೆ. ಇದು ದೇಹವನ್ನು ತಂಪಾಗಿಸುತ್ತದೆ. ಚಿಯಾ ಬೀಜದ ಫೇಸ್ ಪ್ಯಾಕ್ ಚರ್ಮದ ಉರಿಯೂತವನ್ನು ಕಡಿಮೆ ಮಾಡಲು,ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಲು, ಹಾನಿಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಚಿಯಾ ಬೀಜಗಳು ಫೈಬರ್, ಪ್ರೋಟೀನ್, ಒಮೆಗಾ -3 ಕೊಬ್ಬಿನಾಮ್ಲಗಳು, ಕ್ಯಾಲ್ಸಿಯಂ, ಮೆಗ್ನೀಶಿಯಮ್ ಮತ್ತು ರಂಜಕವನ್ನು ಒಳಗೊಂಡು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ಚಿಯಾ ಬೀಜಗಳಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಹೃದಯದ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ.
ಚಿಯಾ ಬೀಜದ ಫೇಸ್ ಪ್ಯಾಕ್ ತಯಾರಿಸುವುದು ಹೇಗೆ
*ಒಂದು ಬೌಲ್ಗೆ 1 ಚಮಚ ಚಿಯಾ ಬೀಜ, 1 ಚಮಚ ಜೇನುತುಪ್ಪ, ಮೊಸರು ಮತ್ತು ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿಕೊಳ್ಳಿ. 15-20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಈ ಮಿಶ್ರಣವನ್ನು ಬಳಸಿದರೆ ನೀವು ಹೊಳೆಯುವ ಚರ್ಮವನ್ನು ಪಡೆಯಬಹುದು.
*ಮೊದಲು ಎರಡು ಚಮಚ ಚಿಯಾ ಬೀಜವನ್ನು ನೆನೆಯಲು ಬಿಡಿ. ನಂತರ ಒಂದು ಬೌಲ್ಗೆ ಎರಡು ಚಮಚ ಚಿಯಾ ಬೀಜ, ಅರ್ಧ ಚಮಚ ತೆಂಗಿನ ಎಣ್ಣೆ, ಒಂದು ಚಮಚ ನಿಂಬೆ ರಸ ಹಾಕಿ ಮಿಶ್ರಣ ಮಾಡಿ. ಮುಖಕ್ಕೆ ಹಚ್ಚಿಕೊಂಡು 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ