ಚಿಕ್ಕನಾಯಕನಹಳ್ಳಿ:
ಬೇಸಿಗೆ ಆರಂಭವಾಗ್ತಿದ್ದು, ಎಲ್ಲೆಡೆ ಬೆಂಕಿ ಅವಘಡಗಳು ಜರುಗುತ್ತಲೇ ಇವೆ.. ಚಿಕ್ಕ ಕಿಡಿ ಹೊತ್ತಿದ್ರು ಸಾಕು ಬೆಂಕಿ ವ್ಯಾಪಿಸಿ ಸಾಕಷ್ಟು ಪ್ರಮಾಣದ ಅರಣ್ಯ ಸಂಪತ್ತು, ಬೆಳೆಗಳು ನಾಶವಾಗ್ತಿವೆ.. ಬೆಂಕಿ ದುರಂತಗಳನ್ನು ಹತೋಟಿಗೆ ತರುವುದೇ ಅಗ್ನಿಶಾಮಕ ಸಿಬ್ಬಂದಿಗೆ ದೊಡ್ಡ ಸವಾಲಾಗಿದೆ. ಚಿಕ್ಕನಾಯಕನಹಳ್ಳಿ ತಾಲೂಕಿನ ಸುಪ್ರಸಿದ್ದ ಕುಪ್ಪುರು ತಮ್ಮಡಿಹಳ್ಳಿ ಬೆಟ್ಟಕ್ಕೆ ಆಕಸ್ಮಕಿ ಬೆಂಕಿ ಹೊತ್ತಿಕೊಂಡಿದ್ದು, ಸುಮಾರು 45 ಸಾವಿರ ಕೊಬ್ಬರಿ ಮಟ್ಟೆ ಧಗಧಗನೆ ಹೊತ್ತಿ ಉರಿದಿದೆ.
ತಮ್ಮಡಿಹಳ್ಳಿ ಮಠದ ಸಮೀಪವಿದ್ದ ಸುಮಾರು 45 ಸಾವಿರ ಮಟ್ಟೆಗೆ ಬೆಂಕಿಹೊತ್ತಿಕೊಂಡಿದ್ದು, ಅಕ್ಕ ಪಕ್ಕಕ್ಕೂ ಬೆಂಕಿ ವ್ಯಾಪಿಸಿದೆ. ಬೆಂಕಿಗೆ ಕೊಬ್ಬರಿ ಮಟ್ಟೆ ಸೇರಿ ಗಿಡ ಮರಗಳು ಬೆಂಕಿಗಾಹುತಿಯಾಗಿವೆ. ಇನ್ನು ಬೆಂಕಿ ದುರಂತದಿಂದ ಸುತ್ತಮುತ್ತಲು ದಟ್ಟ ಹೋಗೆ ಆವರಿಸಿದ್ದು ಸ್ಥಳೀಯರಲ್ಲಿ ಆತಂಕ ಉಂಟಾಯ್ತು.
ಅಲ್ದೇ ಹೊಗೆಯಿಂದಾಗಿ ಸ್ಥಳೀಯರಲ್ಲಿ ಉಸಿರುಗಟ್ಟಿಸುವ ವಾತಾವರಣ ಉಂಟಾಯ್ತು. ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದು ಬೆಂಕಿ ನಂದಿಸಲು ಸಾದ್ಯವಾಗಲಿಲ್ಲ.. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ರು.