ಭದ್ರಾವತಿ : ಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ತಂದೆ ಮಗ ಸಾವು..!

ಭದ್ರಾವತಿ :

ಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ತಂದೆ ಮಗ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ. ಭದ್ರಾವತಿ ಪಟ್ಟಣದ ಭೂತನಗುಡಿಯ ನಿವಾಸಿ ಮಹಮ್ಮದ್‌ ಜಾಬರ್‌ (58) ಮತ್ತು ಅತನ ಮಗ ಜಾವದ್‌ (14) ಮೃತ ದುರ್ದೈವಿಯಾಗಿದ್ದಾರೆ.

ಕುಟುಂಬದ ಜೊತೆ ಭದ್ರಾವತಿ ತಾಲೂಕಿನ ಭದ್ರಾ ಡ್ಯಾಂಗೆ ಹೋಗಿದ್ದರು. ಈ ವೇಳೆ ಜಾವದ್‌ ಹಿನ್ನೀರಿನಲ್ಲಿ ಆಟ ಆಡುತ್ತಾ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಮಗನನ್ನು ರಕ್ಷಿಸಲು ತಂದೆ ನೀರಿಗೆ ಇಳಿದಿದ್ದಾರೆ. ಆದ್ರೆ ದುರದೃಷ್ಟವಶಾತ್‌ ತಂದೆ ಮಗ ಇಬ್ರು ನೀರು ಪಾಲಾಗಿದ್ದಾರೆ. ಇನ್ನು ಘಟನೆ ಮಾಹಿತಿ ತಿಳಿದು ಭದ್ರಾವತಿ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ.

ಈ ಸಂಬಂಧ ಭದ್ರಾವತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author:

...
Sushmitha N

Copy Editor

prajashakthi tv

share
No Reviews