ದೇಶ:
ಕಾಶ್ಮೀರದ ಕಣಿವೆಯಲ್ಲಿ ಏಪ್ರಿಲ್ 22 ರಂದು ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ ಕ್ರೌರ್ಯತೆ ಮೆರೆದಿದ್ರು. ಅದಾದ ಮರುದಿನವೇ ಆಕಸ್ಮಿಕವಾಗಿ ಪಂಜಾಬ್ನ ಫಿರೋಜ್‌ಪುರ ಗಡಿಯನ್ನು ದಾಟಿದ ಬಿಎಸ್ಎಫ್ ಯೋಧ ಪಿ.ಕೆ.ಸಿಂಗ್‌ನನ್ನು ಪಾಕಿಸ್ತಾನಿ ರೇಂಜರ್ಸ್ ಬಂಧಿಸಿದರು. ಈ ವಿಚಾರ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಯೋಧನ ಕುಟುಂಬ ಕಂಗಾಲಾಗಿದೆ.
ಹೌದು, ಉಗ್ರರು ಪ್ರವಾಸಿಗರನ್ನೇ ಟಾರ್ಗೇಟ್ ಮಾಡಿ ದಾಳಿ ನಡೆಸಿದ ಬೆನ್ನಲ್ಲೆ ಭಾರತೀಯ ಯೋಧ ಪಿ.ಕೆ.ಸಿಂಗ್‌ರನ್ನು ಪಾಕಿಸ್ತಾನ ವಶಕ್ಕೆ ಬಂಧಿಸಿದೆ. ಬಿಎಸ್‌ಎಫ್‌ನಲ್ಲಿ ಸೇವೆಸಲ್ಲಿಸುತ್ತಿದ್ದ 40 ವರ್ಷದ ಯೋಧ ಪಿ.ಕೆ.ಸಿಂಗ್ ಬುಧವಾರ ತಾನು ಗಡಿದಾಟುತ್ತಿದ್ದೇನೆ ಅನೋದನ್ನ ಗಮನಿಸದೆ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಹೋದ ವೇಳೆ ಪಾಕಿಸ್ತಾನದ ರೇಂಜರ್ಸ್ ಬಂಧಿಸಿದ್ದಾರೆ.
ಸದ್ಯ ಪಹಲ್ಗಾಮ್ನಲ್ಲಿ 26 ಪ್ರವಾಸಿಗರ ಹತ್ಯೆಯಿಂದಾಗಿ ದೇಶದಲ್ಲಿ ಪ್ರಧಾನಿ ಮೋದಿ ಕ್ಯಾಬಿನೆಟ್ ಸಭೆ ನಡೆಸಿದ್ರು. ಈ ಸಭೆಯಲ್ಲಿ ಪಾಕಿಸ್ತಾನದೊಂದಿಗೆ ಹಲವು ನಂಟುಗಳನ್ನು ಕಿತ್ತೊಗೆಯೋ ಕೆಲ್ಸ ಮಾಡಿದ್ರು. ಈ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವಿನ ಸಂಬಂಧವು ಹದಗೆಟ್ಟಿದೆ. ಈ ಸಂದರ್ಭದಲ್ಲಿ ಯೋಧ ಪಾಕ್ನಲ್ಲಿ ಬಂಧಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನು ಪಿ.ಕೆ.ಸಿಂಗ್‌ಗೆ ಪತ್ನಿ, 7 ವರ್ಷದ ಮಗು ಸೇರಿದಂತೆ ತಂದೆ ತಾಯಿ ಇದ್ದಾರೆ ಎನ್ನಲಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪಿ.ಕೆ.ಸಿಂಗ್ ಕರೆತರುವುದು ಸವಾಲಿನ ಕೆಲ್ಸವೇ ಸರಿ. ಯೋಧನ ಬಿಡುಗಡೆ ಸಂಬಂಧ ದೇಶ ಯಾವ ನಿಲುವನ್ನು ತಾಳುತ್ತದೆ ಎಂದು ಕಾದುನೋಡಬೇಕಿದೆ.