ಪಾವಗಡ: ಗಡಿ ತಾಲೂಕಿನಲ್ಲಿ ಹೆಚ್ಚಾಯ್ತು ಕುಡಿಯುವ ನೀರಿನ ಹಾಹಾಕಾರ

ಪಾವಗಡ: 

ಈಗಾಗಲೇ ಬೇಸಿಗೆ ಆರಂಭವಾಗಿದ್ದು ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡ್ರು ಕೂಡ ನೀರಿನ ಸಮಸ್ಯೆ ಉಂಟಾಗಿದೆ. ಇತ್ತ ಗಡಿ ತಾಲೂಕಿನ ನಲಿಗಾನಹಳ್ಳಿ ಗ್ರಾಮ ಪಂಚಾಯ್ತಿಯ ಎರ್ರಪಾಳ್ಯ ಗ್ರಾಮದಲ್ಲಿ ತುಂಗಭದ್ರಾ ನೀರು ಬರುವ ಮುಂಚೆಯೇ ಜನರು ನೀರಿಗಾಗಿ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.

ಎರ್ರಪಾಳ್ಯ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವೇನೋ ಇದೆ. ಆದ್ರೆ ಅದು ಕೆಟ್ಟು ನಿಂತು ಸುಮಾರು ಒಂದು ವರ್ಷ ಮೇಲಾದ್ರೂ ಅಧಿಕಾರಿಗಳು ಮಾತ್ರ ಇಲ್ಲಿವರೆಗೂ ದುರಸ್ಥಿ ಮಾಡಿಸುವಂತ ಕೆಲಸ ಮಾತ್ರ ಮಾಡ್ತಾ ಇಲ್ಲ. ಇನ್ನು ಗ್ರಾಮದ ಜನರಿಗೆ ನೀರಿಗಾಗಿ ಪರ್ಯಾಯ ವ್ಯವಸ್ಥೆಯನ್ನ ಕೂಡ ಮಾಡದೇ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿಸ್ತಾ ಇದಾರೆ. ಅಲ್ದೇ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಸುಮಾರು ಮೂರುನಾಲ್ಕು ಕಿಲೋಮೀಟರ್ಗಳಷ್ಟು ನಡೆದುಕೊಂಡು ಹೋಗಿ ತರುವಂತಹ ಸ್ಥಿತಿ ನಿರ್ಮಾಣ ಆಗಿದೆ. ದ್ವಿಚಕ್ರ ವಾಹನ ಇರುವವರು ಬೈಕ್ಗಳಲ್ಲಿ ಹೋಗಿ ಬಿಂದಿಗೆಗಳು, ಕ್ಯಾನ್ಗಳ ಮೂಲಕ ನೀರು ತರುತ್ತಿದ್ದಾರೆ. ಅಲ್ದೇ ಗ್ರಾಮೀಣ ಭಾಗದ ನಾಗರಿಕರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ

ಇನ್ನಾದ್ರು ಪಂಚಾಯ್ತಿ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಿದೆ.  

Author:

share
No Reviews