ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರ. ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇದೆ. ಇಷ್ಟು ಮಾತ್ರವಲ್ಲದೆ ಮೆಗ್ನಿಶಿಯಂ, ಪೊಟಾಶಿಯಂ, ನಾರಿನಾಂಶ ಮತ್ತು ಪ್ರೋಟೀನ್ ಬಾಳೆ ಹಣ್ಣಿನ ಸಿಪ್ಪೆಯಲ್ಲಿದೆ. ಇನ್ನು ಸೌಂದರ್ಯವನ್ನು ವೃದ್ದೀಸಲು ಬಾಳೆಹಣ್ಣಿನ ಸಿಪ್ಪೆ ಬಹಳ ಪ್ರಯೋಜನಕಾರಿ.
*ಹೊಳೆಯುವ ಹಲ್ಲುಗಳಿಗಾಗಿ
ಪ್ರತಿ ದಿನ 1 ನಿಮಿಷಗಳ ಕಾಲ ಬಾಳೆಹಣ್ಣಿನ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಳೆ ಚೆನ್ನಾಗಿ ಉಜ್ಜುವುದರಿಂದ ನಿಮ್ಮ ಹಲ್ಲುಗಳು ಫಳ ಫಳ ಹೊಳೆಯುತ್ತದೆ.
*ಮೊಡವೆಗಳು ನಿವಾರಣೆಯಾಗುತ್ತದೆ
ಮೊಡವೆಗಳು ಮೊಡವೆಗಳು ಉಂಟಾದಾಗ ಅದರ ಮೇಲೆ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದನ್ನು ಹಾಗೆಯೇ 30 ನಿಮಿಷ ಬಿಡಿ. ಇದರಿಂದ ನೋವು ಕಡಿಮೆಯಾಗುತ್ತದೆ. ಮತ್ತು ಮೊಡವೆಗಳು ನಿವಾರಣೆಯಾಗುತ್ತವೆ.
*ಹೊಳೆಯುವ ತ್ವಚೆಗಾಗಿ
ಮುಖದ ಕಾಂತಿಗಾಗಿ ಅಕ್ಕಿಹಿಟ್ಟನ್ನು ಸ್ವಲ್ಪ ಪೇಸ್ಟ್ ರೀತಿಯಲ್ಲಿ ಕಲಸಿಕೊಳ್ಳಿ. ನಂತರ ಸಿಪ್ಪೆಯಿಂದ ಅಕ್ಕಿಹಿಟ್ಟನ್ನು ಅದ್ದಿಕೊಂಡು ಮುಖಕ್ಕೆ ಮತ್ತು ಕೈ ಕಾಲುಗಳಿಗೆ ಮಸಾಜ್ ಮಾಡಿಕೊಂಡರೆ ತಕ್ಷಣ ಮುಖದ ಕಾಂತಿ ಹೆಚ್ಚಾಗುತ್ತದೆ.