ದೊಡ್ಡಬಳ್ಳಾಪುರ : ಈಜು ಬಾರದೇ ಬಾವಿಯಲ್ಲಿ ಮುಳುಗಿ ಯುವಕ ಸಾವು..!

ದೊಡ್ಡಬಳ್ಳಾಪುರ :

ಈಜಲು ಹೋಗಿದ್ದ ಯುವಕ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕರಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕರೇನಹಳ್ಳಿ ಗ್ರಾಮದ ನಿವಾಸಿ 22 ವರ್ಷದ ತೇಜಸ್‌ ಮೃತ ದುರ್ದೈವಿಯಾಗಿದ್ದಾನೆ. ಬಿಸಿಲಿನ ತಾಪ ಹೆಚ್ಚಾಗಿದ್ದು, ಸ್ನೇಹಿತರ ಜೊತೆ ಬಾವಿಯಲ್ಲಿ ಈಜಲು ತೇಜಸ್‌ ತೆರಳಿದ್ದ. ಬಾವಿಯಲ್ಲಿ ಈಜುವ ವೇಳೆ ಹೊರ ಬರಲು ಆಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಮುಳುಗುತ್ತಿದ್ದ ಯುವಕನನ್ನು ರಕ್ಷಿಸಲು ಸ್ನೇಹಿತರು ಮುಂದಾಗಿದ್ದರು, ಆದರೆ ದುರಾದೃಷ್ಟವಶಾತ್‌ ನೀರಿನಲ್ಲಿ ಮುಳುಗಿ ಯುವಕ ತೇಜಸ್‌ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ, ಬಾವಿಯಲ್ಲಿದ್ದ ಶವವನ್ನು ಹೊರ ತೆಗೆದಿದ್ದಾರೆ. ಬಳಿಕ ಮೃತ ದೇಹವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಮೃತ ದೇಹವನ್ನು ಹಸ್ತಾಂತರ ಮಾಡಲಾಯಿತು.  ಮನೆಯ ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ರಮ ಕೈಗೊಂಡಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚಾಗಿದೆ ಜೊತೆಗೆ ಶಾಲೆಗಳಿಗೆ ರಜೆ ಇದ್ದು, ಮಕ್ಕಳು ಈಜಲು ಬಾವಿ, ಕೆರೆಗಳತ್ತ ಮುಖ ಮಾಡ್ತಾ ಇದ್ದು. ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕಿದೆ. 

Author:

...
Shabeer Pasha

Managing Director

prajashakthi tv

share
No Reviews