ದೊಡ್ಡಬಳ್ಳಾಪುರ : ಕಂಪನಿ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡ ಶಾಸಕ

 ಕೊನಘಟ್ಟ ಕೆರೆ ಸ್ಥಳವನ್ನು ಶಾಸಕ ಧೀರಜ್‌ ಮುನಿರಾಜ್‌, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ತಹಶೀಲ್ದಾರ್‌ ಸೇರಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊನಘಟ್ಟ ಕೆರೆ ಸ್ಥಳವನ್ನು ಶಾಸಕ ಧೀರಜ್‌ ಮುನಿರಾಜ್‌, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ತಹಶೀಲ್ದಾರ್‌ ಸೇರಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ:

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಡ ಕೆರೆಗೆ ಕಲುಷಿತ ನೀರು ಹರಿದು ಬರುತ್ತಿದ್ದು, ಮತ್ತೊಂದು ಅರ್ಕಾವತಿ ಹೋರಾಟಕ್ಕೆ ನಾಂದಿ ಆಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಫಾಕ್ಸ್‌ಕಾನ್‌ ಕಂಪನಿಯಿಂದ ಕಲುಷಿತ ನೀರನ್ನು ಹೊರಗೆ ಬಿಟ್ಟ ಹಿನ್ನೆಲೆ ಗ್ರಾಮಸ್ಥರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. KIADB ಗೆ ಜಮೀನು ನೀಡಿದ್ದಲ್ಲದೇ ಮಲದ ವಾಸನೆಯಿಂದ ಗ್ರಾಮಸ್ಥರು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ ಗ್ರಾಮಸ್ಥರು ಫಾಕ್ಸ್‌ಕಾನ್‌ ಕಂಪನಿ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಹೋರಾಟ ನಡೆಸಲು ನಿರ್ಧರಿಸಿದ್ದರು.

ಫಾಕ್ಸ್ ಕಾನ್ ಕಂಪನಿ ಬಳಿ ಕಲುಷಿತ ನೀರಿಗಾಗಿಯೇ‌ ಒಂದು ಗುಂಟೆ ಜಮೀನನ್ನು ನೀಡಲಾಗಿದ್ದು, ಕಟ್ಟೆಯನ್ನು ನಿರ್ಮಾಣ ಮಾಡಲಾಗಿದೆ. ಇದೀಗ ಆ ಕಟ್ಟೆಯನ್ನು ಹೊಡೆದು ರಾಜಕಾಲುವೆಗೆ ಕಲುಷಿತ ನೀರು ಹರಿದು ಹೋಗ್ತಾ ಇದ್ದು, ಕೊನಘಟ್ಟ ಗ್ರಾಮದ ಕೆರೆಗೆ ಸೇರುತ್ತಿದೆ. ಹೀಗಾಗಿ ಗ್ರಾಮಸ್ಥರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದು ಕಂಪನಿ ವಿರುದ್ಧ ಸಿಡಿದೆದ್ದರು. ಹೀಗಾಗಿ ಕೊನಘಟ್ಟ ಕೆರೆ ಸ್ಥಳವನ್ನು ಶಾಸಕ ಧೀರಜ್‌ ಮುನಿರಾಜ್‌, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ತಹಶೀಲ್ದಾರ್‌ ಸೇರಿ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಫಾಕ್ಸ್‌ ಕಾನ್‌ ಕಂಪನಿಗೆ ಶಾಸಕ ಧೀರಜ್‌ ಮುನಿರಾಜ್‌ ಹಿಗ್ಗಾಮುಗ್ಗಾ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಸದ್ಯ ಹೊಡೆದಿರುವ ಕಟ್ಟೆಯನ್ನು ಮುಚ್ಚುವಂತೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಇಲ್ಲಿನ ತ್ಯಾಜ್ಯ ನೀರು ರಾಜಕಾಲುವೆ ಸೇರಿದಂತೆ ಯಾವುದೇ ಮೂಲಗಳಿಂದ ಹೊರಬಾರದಂತೆ ಸಿಮೆಂಟ್ ವಾಲ್ ನಿರ್ಮಿಸುವಂತೆ ಸ್ಥಳೀಯರು ಆಗ್ರಹ ಮಾಡಿದರು. ಆದರೆ ಫಾಕ್ಸ್ ಕಾನ್ ಸಿಬ್ಬಂದಿ ಗ್ರಾಮಸ್ಥರ ಹಾಗೂ ಶಾಸಕರ ಆಗ್ರಹಕ್ಕೆ ಕ್ಯಾರೆ ಎನ್ನದಿರುವುದಕ್ಕೆ ಸ್ಥಳೀಯರು ಹಾಗೂ ಶಾಸಕರ ಆಕ್ರೋಶಕ್ಕೆ  ಕಾರಣವಾಗಿದೆ.

Author:

share
No Reviews