ದೊಡ್ಡಬಳ್ಳಾಪುರ :
ದೊಡ್ಡಬಳ್ಳಾಪುರದ ನಗರ ಪೊಲೀಸ್ ಠಾಣಾ ಆವರಣದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನೆಲೆ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ನೇತೃತ್ವದಲ್ಲಿ ರೌಡಿ ಪರೇಡ್ ನಡೆಸಲಾಯಿತು. ಈ ವೇಳೆ ಇಪ್ಪತ್ತಕ್ಕೂ ಹೆಚ್ಚು ರೌಡಿ ಶೀಟರ್ ಗಳು ಭಾಗಿಯಾಗಿದ್ದರು.
ಈ ವೇಳೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ರೌಡಿಶೀಟರ್ ಗಳನ್ನು ಕರೆಸಿದ್ದು, ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಇರಬೇಕು, ಒಂದು ವೇಳೆ ಕಾನೂನಿನ ಎಲ್ಲೆ ಮೀರಿ ನಡೆದುಕೊಂಡು, ಸಮಾಜಘಾತುಕ ಚಟುವಟಿಕೆಯಲ್ಲಿ ಭಾಗಿಯಾದರೆ ಮುಲಾಜಿಲ್ಲದೇ ಗಡಿಪಾರು ಮಾಡಿ, ತಕ್ಕ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಿದ್ರು. ಅಲ್ಲದೇ ಹತ್ತು ವರ್ಷಗಳ ಕಾಲ ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗವಹಿಸದಿದ್ದರೆ ರೌಡಿ ಪಟ್ಟಿಯಿಂದ ಕೈ ಬಿಡಲಾಗುವುದು ಎಂದು ತಿಳಿಸಿದರು. ರೌಡಿಶೀಟರ್ ಗೆ ಈ ವೇಳೆ ಕಿವಿಯಲ್ಲಿ ಹಾಕಿದ್ದ ಓಲೆಯನ್ನು ತೆಗಿ ಎಂದು ಹೇಳಿದ್ರು.