ದೊಡ್ಡಬಳ್ಳಾಪುರ : ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳ ಪರದಾಟ

ದೊಡ್ಡತುಮಕೂರಿನ ಸರ್ಕಾರಿ ಆಸ್ಪತ್ರೆ
ದೊಡ್ಡತುಮಕೂರಿನ ಸರ್ಕಾರಿ ಆಸ್ಪತ್ರೆ
ತುಮಕೂರು

ತುಮಕೂರುದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಯಾವಾಗ ಬಂದರು ಡಾಕ್ಟರ್‌ ಮಾತ್ರ ಸಿಗುವುದಿಲ್ಲ, ಕಿಲೋ ಮೀಟರ್‌ ಗಟ್ಟಲೆ ವಯಸ್ಸಾದವರು, ಗರ್ಭಿಣಿಯರು ನಡೆದುಕೊಂಡು ಬಂದರು ನರ್ಸ್‌ಗಳೇ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. 

ಇತ್ತೀಚಿನ ದಿನಗಳಲ್ಲಿ ರೋಗ ರುಚಿನಗಳು ಹೆಚ್ಚಾಗಿದ್ದು, ನಿತ್ಯ ಆಸ್ಪತ್ರೆಯತ್ತ ನೂರಾರು ಮಂದಿ ರೋಗಿಗಳು ಬರ್ತಾರೆ. ಹಾಗೇಯೇ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರಿನ ಸರ್ಕಾರಿ ಆಸ್ಪತ್ರೆಗೆ ನಿತ್ಯ ಅಕ್ಕಪಕ್ಕದ ಗ್ರಾಮದ ಜನರು ಚಿಕಿತ್ಸೆಗೆಂದು ಬರುತ್ತಾರೆ, ಆದರೆ ಆಸ್ಪತ್ರೆಯಲ್ಲಿ ವೈದ್ಯರು ಮಾತ್ರ ನಾಪತ್ತೆಯಾಗಿರುತ್ತಾರೆ. ಆಸ್ಪತ್ರೆಯಲ್ಲಿ ಕೇಳಿದರೆ ಮೀಟಿಂಗ್‌ಗೆ ಹೋಗಿದ್ದಾರೆ, ಅಂತಾ ಸಮಜಾಯಿಷಿ ಕೊಟ್ಟು ನರ್ಸ್‌ಗಳೇ ಚಿಕಿತ್ಸೆ  ಕೊಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಸ್ಥಳೀಯ ಆಸ್ಪತ್ರೆಯ ವೈದ್ಯರು ಹಾಸ್ಪಿಟಲ್‌ ಹಾಗೂ ಕ್ಲಿನಿಕ್‌ ನಡೆಸಿಕೊಂಡು ಹೋಗೋದಲ್ದೇ, ಇಲ್ಲಿ ದಂಧೆಯನ್ನು ಮಾಡಿಕೊಂಡು ಹೋಗ್ತಾ ಇದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಆಸ್ಪತ್ರೆಗೆ ವಯಸ್ಸಾದವರು, ಮಕ್ಕಳನ್ನು ಕರೆದುಕೊಂಡು ಬರ್ತಾರೆ. ಆದರೆ ಇಲ್ಲಿ ಡಾಕ್ಟರ್‌ಗಳೆ ಇರಲ್ಲ ಅವರಿಗಾಗಿ ಕಾಯ್ದು ಕಾಯ್ದು ಸಾಕಾಗಿ. ಮತ್ತೆ ಮನೆಗೆ ವಾಪಸ್‌ ಹೋಗುವ ದುಸ್ಥಿತಿ ಇದೆ ಎಂದರು.

ರಾಜ್ಯದಲ್ಲಿ ಹವಾಮಾವ ಬದಲಾಗುತ್ತಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಇದ್ದು, ಸೂಕ್ತ ಸಮಯಕ್ಕೆ ವೈದ್ಯರಿಲ್ಲದೇ ಜೀವ ಉಳಿಸಿಕೊಳ್ಳಲು ಜನರು ಪರದಾಡುವಂತಾಗಿದೆ. ದೊಡ್ಡ ತುಮಕೂರಿನ ಪ್ರಾಥಮಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಬರುವ ಗರ್ಭಿಣಿಯರಿಗೆ, ವಯೋ ವೃದ್ದರಿಗೆ ನರ್ಸ್‌ಗಳೇ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ.

Author:

share
No Reviews