ಹೀಗೆ ಜಮೀನಿನಲ್ಲಿ ಅಲೆದಾಡುತ್ತಿರೋ ವೃದ್ಧ ದಂಪತಿಗೆ ಅನಾರೋಗ್ಯ ಬೆನ್ನಿಗಟ್ಟಿಕೊಂಡಿದೆ… ರೋಗ ವಾಸಿಗೆ ನಿತ್ಯ ಆಸ್ಪತೆಗೆ ಅಲೆದು ಅಲೆದು ಸುಸ್ತಾಗಿದ್ದಾರೆ.. ಇದ್ರ ಮಧ್ಯೆ ತಮ್ಮ ಜಮೀನನನ್ನು ಉಳಿಸಿಕೊಳ್ಳಕು ಅಲೆದಾಡುವಂತಹ ಸ್ತಿತಿ ನಿರ್ಮಾಣ ಆಗಿದೆ.. ಅದು ಆಗಿರೋದು ಕಂದಾಯ ಇಲಾಖೆ ಅಧಿಕಾರಿಗಳ ಯಡವಟ್ಟಿನಿಂದಾಗಿ..
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ನಿವಾಸಿಗಳಾದ ಗಂಗರಾಜು ಹಾಗೂ ನಾಗರತ್ನಮ್ಮ ಎಂಬ ವೃದ್ಧ ದಂಪತಿಗೆ ಸೇರಿದ ಜಮೀನು ಬೇರೆಯವರ ಪಾಲಾಗುತ್ತಿದ್ದು, ನಿತ್ಯ ಸಂಕಟ ಪಡುವಂತಾಗಿದೆ. ದೊಡ್ಡಬೆಳಮಂಗಲದ ನಿವಾಸಿಗಳಾದ ಗಂಗಾರಾಜು ಹಾಗೂ ನಾಗರತ್ನಮ್ಮ ಎಂಬ ದಂಪತಿಗೆ ಸರ್ವೇ ನಂಬರ್ 159ರಲ್ಲಿ ಎರಡು ಎಕರೆ ಜಮೀನು ಇದೆ… ಈ ಜಮೀನು ಗಂಗರಾಜು ಅವರ ತಂದೆ ಗಂಗನರಸಯ್ಯ ಎಂಬುವವರಿಗೆ ಸೇರಿದ್ದು, ತಂದೆ ಮರಣದ ನಂತರ ಪಾಣಿ ಹಾಗೂ ಖಾತೆಗೆ ಅರ್ಜಿ ಹಾಕಿದ್ದಾರೆ.. ಆದ್ರೆ ದೊಡ್ಡಬೆಳವಂಗಲ ನಾಡ ಕಛೇರಿಯ ಅಧಿಕಾರಿಗಳು ಮಾಡಿರುವ ಎಡವಟ್ಟಿಗೆ ಗಂಗರಾಜು ಜಮೀನು ಜಯಮ್ಮ ಎಂಬವವರ ಹೆಸರಿಗೆ ಖಾತೆಯಾಗಿದೆ… ಇದ್ರಿಂದ ಕಂಗಲಾದ ಗಂಗಾರಾಜು ದಂಪತಿ ಜಮೀನು ಉಳಿಸಿಕೊಳ್ಳಲು ನಿತ್ಯ ಸರ್ಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ.
:.ಕಳೆದ ಆರು ತಿಂಗಳಿಂದ ದೊಡ್ಡಬಳ್ಳಾಪುರ ತಾಲ್ಲೂಕು ಕಛೇರಿ, ಉಪ ವಿಭಾಗಾಧಿಕಾರಿ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಕಛೇರಿಗೆ ಅಲೆದು ಅಲೆದು ಸಾಕಾಗಿ, ದಿಕ್ಕು ತೋಚದ ಹಂತಕ್ಕೆ ಹೋಗಿದ್ದಾರೆ. ನ್ಯಾಯ ಎಲ್ಲಿ ಸಿಗುತ್ತೋ ಇಲ್ವೋ ಅಂತಾ ಕಣ್ಣೀರಿಡುತ್ತಿದ್ದಾರೆ.:
ಒಟ್ಟಾರೆ ಒಂದೆಡೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಬಡ ಜನರ ಜಮೀನುಗಳಿಗೆ ಉಚಿತವಾಗಿ ಮನೆ ಬಾಗಿಲಿಗೆ ದಾಖಲಾತಿಗಳನ್ನು ನೀಡಲು ಮುಂದಾಗಿದ್ದಾರೆ. ಆದರೆ ಕಂದಾಯ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯದಿಂದ ಸರ್ಕಾರಿ ಕಛೇರಿಗಳಿಗೆ ಅಲೆ ಅಲೆದು ಪ್ರಾಣ ಬಿಡುವ ಹಂತಕ್ಕೆ ಹೋಗುತ್ತಿದ್ದಾರೆ. ಇಂತಹ ಬೇಜವಾಬ್ದಾರಿತನ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ನೊಂದ ವೃದ್ಧ ದಂಪತಿಗೆ ನ್ಯಾಯ ಒದಗಿಸಬೇಕಿದೆ.