ಯೋಗ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತಿನಂತೆ ಯೋಗದ ಮಹತ್ವ ಎಲ್ಲರಿಗೂ ತಿಳಿದೆ ಇದೆ.. ಯಾವುದೇ ಕಾಯಿಲೆ ಇರಲಿ, ರೋಗವನ್ನು ಹೊಡೆದುರುಳಿಸುವ ಶಕ್ತಿ ಇರೋದು ಯೋಗಕ್ಕೆ ಮಾತ್ರ.. ಇಲ್ಲಿ ಮಕ್ಕಳ ಮಾಡ್ತಿರೋ ಕಸರತ್ತು ನೋಡಿದ್ರೆ ಈ ಮಕ್ಕಳ ಮೈ ಯಲ್ಲಿ ಮೂಳೆ ಇದ್ಯೋ ಇಲ್ವೋ ಅಂತ ಅನುಮಾನ ಬರ್ದೇ ಇರೋಲ್ಲ.. ಈ ಮಕ್ಕಳು ಯಾವುದೇ ತೊಂದ್ರೆ ಇಲ್ಲದೇ ಯೋಗವನ್ನು ಅಭ್ಯಾಸ ಮಾಡ್ತಾ ಇದ್ದು ದೊಡ್ಡವರಿಗೂ ಶಾಕ್ ಕೊಟ್ಟಿದ್ದಾರೆ…
ದೊಡ್ಡಬಳ್ಳಾಪುರದ ಶ್ರೀ ಯೋಗ ದೀಪಿಕಾ ಯೋಗ ಕೇಂದ್ರ ಟ್ರಸ್ಟ್..ಹಾಗೂ ಶ್ರೀ ರಾಮಕೃಷ್ಣ ಯೋಗ ಶಿಕ್ಷಣ ಕೇಂದ್ರದಲ್ಲಿ ವಿಶ್ವ ಪ್ರಚಾರಕ್ಕಾಗಿ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡ ಮಕ್ಕಳವರೆಗೂ ಯೋಗ ಪ್ರದರ್ಶನ ಮಾಡಿದ್ರು. ಇನ್ನು ಸಾಕಷ್ಟು ವಿವಾದಗಳ ನಡುವೆ ಪ್ರಪ್ರಥಮ ಬಾರಿಗೆ ಯೋಗ ಗುರುಗಳಾದ ರಾಮಕೃಷ್ಣ ಹಾಗೂ ಹರ್ಷಿಣಿ ಅವರ ಮಾರ್ಗದರ್ಶನದೊಂದಿಗೆ ಹಲವು ಮಕ್ಕಳು ಕೂರ್ಮಸನವನ್ನು ಕಲಿತು ಜೊತೆಗೆ ವಿಶೇಷವಾಗಿ ಯಾರು ಮಾಡದಿರುವ ಸಾಹಸಕ್ಕೆ ಕೈಹಾಕಿದ್ದಾರೆ.. ಹೌದು ಸೂಕ್ತ ಮಾರ್ಗದರ್ಶನದೊಂದಿಗೆ 100 ರಿಂದ 225 ಕೆಜಿ ವರೆಗೂ ಆಸನದಲ್ಲಿ ಬಾರ ಹೊತ್ತು ಹೊಸ ಪ್ರಯೋಗಕ್ಕೆ ಮಕ್ಕಳ ಸಾಹಸ ಸಾಕ್ಷಿ ಆಯಿತು.
ಇನ್ನು ಮಕ್ಕಳ ಸಾಹಸ ಕಂಡ್ರೆ ಒಮ್ಮೆ ಮೈ ಜುಮ್ ಅನ್ನಿಸದೆ ಇರಲಾರದು, ಯಾಕೆಂದರೆ ಇಷ್ಟು ಬಾರ ಹೊತ್ತ ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಕಾಣಿಸದಿರುವುದು ಮತ್ತು ಅದಕ್ಕೆ ಅವರ ಪೋಷಕರ ಸಹಕಾರವಿರುವುದು ವಿಶೇಷವಾದವಾಗಿತ್ತು. ಭಾರವನ್ನು ಹೊತ್ತು ಆಸನವಾದ ನಂತರ.. ತಕ್ಷಣವೇ ಬೇರೆ ಬೇರೆ ಯೋಗದ ಭಂಗಿ ಮಾಡುವುದು ನಿಜಕ್ಕೂ ರೋಚಕ ಹಾಗೂ ಸಾಹಸವೇ ಸರಿ..
ಮುಂದಿನ ದಿನಗಳಲ್ಲಿ ಅತ್ಯುತ್ತಮವಾಗಿ ಕೂರ್ಮಸಾನ ಯೋಗ ಶಿಕ್ಷಣ ನೀಡಿ ಅದರ ಮಹತ್ವ ಮತ್ತು ಪ್ರಯೋಜನ ತಿಳಿಸುವುದರ ಜೊತೆಗೆ ಇದನ್ನು ಗಿನ್ನಿಸ್ ದಾಖಲೆ ಮಾಡುವುದು ಯೋಗ ಗುರುಗಳ ಕನಸಾಗಿದೆ.. ಇವರ ಯೋಗ ಶಿಕ್ಷಣದಲ್ಲಿ 2.5 ವರ್ಷದಿಂದ 25 ವರ್ಷದ ಮಕ್ಕಳಿನ ವರೆಗೂ ಯೋಗವನ್ನು ಕಲಿತು ಇದರ ಪ್ರಯೋಜನ ಪಡೆಯುತ್ತಿದಾರೆ..