ದೊಡ್ಡಬಳ್ಳಾಪುರ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಜೀವನಾಡಿಯಾಗಿರೋ ಅರ್ಕಾವತಿ ಕೆರೆ ಉಳಿವಿಗಾಗಿ ಹೋರಾಟಗಾರರು ಸಾಕಷ್ಟು ಹೋರಾಟ ಮಾಡಿದ್ದು, ಈ ಬಗ್ಗೆ ಪ್ರಜಾಶಕ್ತಿ ಟಿವಿ ವರದಿ ಬಿತ್ತರಿಸುತ್ತಲೇ ಬಂದಿದೆ. ಹೋರಾಟಗಾರರು ಬ್ಯಾಂಕ್ ಸರ್ಕಲ್ ಬಳಿ ಇರೋ ಇಂಡಿಗೋ ಬ್ಲೂ ಕೈಗಾರಿಕಾ ಘಟಕದ ವಿರುದ್ಧ ಆರೋಪ ಮಾಡಿದ್ದರು. ಹೀಗಾಗಿ ತಹಶೀಲ್ದಾರ್, ಪಟ್ಟಣ ಪಂಚಾಯ್ತಿ, ಪೊಲೀಸ್ ಅಧಿಕಾರಿಗಳು ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಭೇಟಿ ಕೊಟ್ಟು ರಾಸಾಯಿನಿಕ ನೀರು ಬಿಡುವ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆದರೆ ಹೋರಾಟಗಾರರ ಆರೋಪಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಹೋರಾಟಗಾರರು, ಸ್ಥಳೀಯರು ಹಾಗೂ ಇಂಡಿಗೋ ಬ್ಲೂ ಕಂಪನಿ ನಡುವೆ ವಾಗ್ವಾದ, ಗಲಾಟೆ ಜೋರಾಗಿಯೇ ಇತ್ತು. ಅಲ್ಲದೇ ಇಂಡಿಗೋ ಬ್ಲೂ ಕಂಪನಿ ಹೋರಾಟಗಾರರ ಮುಂದೇಯೇ ಸತ್ಯ ಸತ್ಯತೆ ತಿಳಿಸಲು ಮುಂದಾಯಿತು. ಆಡಳಿತ ವರ್ಗವೇ ಮುಂದೆ ನಿಂತು ಹೋರಾಟಗಾರರು ಆರೋಪ ಮಾಡಿದ ಕಡೆಗಳಲ್ಲಿ ಕಲುಷಿತ ನೀರು ಸೇರುತ್ತಿದೆಯೇ ಎಂದು ತಿಳಿದುಕೊಳ್ಳಲು, ಪೈಪ್ಗಳನ್ನು ಕಟ್ ಮಾಡಿ ಚೆಕ್ ಮಾಡಿಸಿದ್ದಾರೆ. ಇದರಿಂದ ಕಂಪನಿ ಮೇಲೆ ಹೋರಾಟ ಸಮಿತಿ ಹಾಕಿದ ಆರೋಪ ನಿರ್ಧಾರವೆಂದು ಒಂದು ಹಂತಕ್ಕೆ ಸಾಬೀತಾಯಿತು.
ಹೋರಾಟಗಾರರು ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಇಂಡಿಗೋ ಬ್ಲೂ ಕಂಪನಿಯ ಅಧಿಕಾರಿಗಳು, ಇಲ್ಲಿ ಸುತ್ತಮುತ್ತ ಸಾವಿರಾರು ಮರಗಳಿವೆ, ನಾವು ಕಲುಷಿತ ನೀರು ಬಿಡುವುದಾದ್ರೆ ಈ ಮರಗಳು ಯಾವಾಗಲೋ ಒಣಗುತ್ತಿದ್ದವು. ಆದರೆ ಮರಗಳು ಚೆನ್ನಾಗಿಯೇ ಇದ್ದಾವೆ ಎಂದು ನೇರವಾಗಿ ಉತ್ತರ ಕೊಟ್ಟು ತಮ್ಮ ಕಂಪನಿ ಮೇಲೆ ಇರೋ ಆರೋಪವನ್ನು ತಳ್ಳಿ ಹಾಕಿದರು. ಜೊತೆಗೆ ನಮ್ಮ ಕಂಪನಿಯನ್ನು ನಂಬಿಕೊಂಡು 3 ಸಾವಿರ ಕಾರ್ಮಿಕ ಕುಟುಂಬ ಜೀವನ ನಡೆಸುತಿದೆ. ಪ್ರತಿಯೊಬ್ಬರ ಜೀವ ಜೀವನದ ಬಗ್ಗೆ ಹಾಗೂ ಪರಿಸರದ ಬಗ್ಗೆ ನಮಗೂ ಕಾಳಜಿ ಇದೆ ಎಂದು. ಹಾಗೂ ಇಂತಹ ಹೋರಾಟಕ್ಕೆ ಸದಾ ನಾವು ಬೆಂಬಲ ಕೊಡುವುದಾಗಿ ಹೇಳಿದರು.
ಇಂಡಿಗೋ ಬ್ಲೂ ಕಂಪನಿ ವಿರುದ್ಧ ಆರೋಪ ನಿರಾಧಾರವಾದ ಹಿನ್ನೆಲೆ ಕಂಪನಿ ಹೋರಾಟಗಾರರ ಬಳಿ ಸಹಿ ಸಂಗ್ರಹಕ್ಕೆ ಮುಂದಾದರು. ಆದರೆ ಸಹಿ ಮಾಡಲು ಹೋರಾಟಗಾರರು ನಿರಾಕರಿಸಿದರು. ನಮ್ಮ ಹೋರಾಟ ಇನ್ನು ಮುಗಿದಿಲ್ಲ, ನೀರು ಹರಿಸಿ ಕೆರೆಯ ನೈರ್ಮಲ್ಯವನ್ನು ಹಾಳು ಮಾಡುವ 18 ಕಾರ್ಖಾನೆಗಳ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಅಲ್ಲದೇ ಇಂದು ನಮ್ಮ ಹೋರಾಟಕ್ಕೆ ಅಧಿಕಾರಿಗಳು ಬೆಂಬಲ ಕೊಡಲಿಲ್ಲ ಎಂದು ಹೋರಾಟ ಸಮಿತಿ ಬೇಸರ ವ್ಯಕ್ತಪಡಿಸಿದರು.