ಕೊಪ್ಪಳ
ಹೈದರಾಬಾದ್ನ ಪ್ರತಿಷ್ಠಿತವಿಕೆಸಿ ಆಸ್ಪತ್ರೆಯ ವೈದ್ಯೆ ಅನನ್ಯ ರಾವ್ ರೀಲ್ಸ್ ಮಾಡುತ್ತ ತುಂಗಭದ್ರಾ ನದಿಗೆ ಹಾರಿ ಆಪತ್ತಿಗೆ ಸಿಲುಕಿದ್ದಾರೆ.ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿಯಿರುವ ನಿಷೇಧಿತ ತುಂಗಾಭದ್ರ ನದಿಯ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸದ್ಯ ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಹೈದರಾಬಾದ್ನಿಂದ ಫೆಬ್ರವರಿ 17ರಂದು ಕೊಪ್ಪಳದ ಆನೆಗೊಂದಿ ಭಾಗದ ಪ್ರವಾಸಿ ತಾಣ ವೀಕ್ಷಣೆ ಮಾಡಲು ಅನನ್ಯ ಬಂದಿದ್ದರು. ಸ್ನೇಹಿತರಾದ ಸಾತ್ವಿಕ್, ಆಶಿತಾ ಜೊತೆ ಆಗಮಿಸಿದ್ದರು. ಅದರಂತೆ ಮೊನ್ನೆಯ ದಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿರುವ ವೈಟ್ ಸ್ಯಾಂಡ್ ರೆಸಾರ್ಟ್ ನಲ್ಲಿ ಇದ್ದರು.
ಹೈದರಾಬಾದ್ ಮೂಲದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಅನನ್ಯ ರಾವ್ ಸ್ನೇಹಿತರ ಜೊತೆಗೆ ಗಂಗಾವತಿ ಬಳಿಯ ಸಾಣಾಪುರದ ಪ್ರವಾಸಿ ತಾಣಕ್ಕೆ ಬಂದಿದ್ದರು. ಈಜುಗಾರ್ತಿಯಾಗಿದ್ದ ವೈದ್ಯೆ ಅನನ್ಯ ತುಂಗಾಭದ್ರ ನದಿಯ ಬಳಿಗೆ ಬಂದು ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ೨೦ ಅಡಿ ಎತ್ರದ ಕಲ್ಲು ಬಂಡೆಯಿಂದ ನೀರಿಗೆ ಜಿಗಿದಿದ್ದಾಳೆ. ಮೇಲಿಂದ ಜಿಗಿದು ಈಜಾಡುವ ದೃಶ್ಯವನ್ನು ಸ್ನೇಹಿತ ಸೆರೆ ಹಿಡಿಯುವುದು ಮೊಬೈಲ್ನಲ್ಲಿ ದಾಖಲಾಗಿದೆ. ಮೊಬೈಲ್ನಲ್ಲಿ ಸ್ನೇಹಿತೆಯರು ವಿಡಿಯೋ ಮಾಡುತ್ತಿದ್ದಾಗಲೇ ವೈದ್ಯೆ ಕೆಳಗೆ ಜಿಗಿದು ಕೆಲಕಾಲ ಈಜಿದ ಬಳಿಕ ದಡಕ್ಕೆ ಬರಲಾಗದೆ ನೀರಿನ ಸುಳಿಗೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾಳೆ. ಸ್ನೇಹಿತೆಯರ ಎದುರಲ್ಲೇ ವೈದ್ಯೆ ಸಾವಿಗೀಡಾಗಿದ್ದಾಳೆ.