ಹೆಬ್ಬೂರು :
ಹೆಬ್ಬೂರು ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ದಿವ್ಯ ಆರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 21 ಸದಸ್ಯರನ್ನು ಒಳಗೊಂಡಿರೋ ಹೆಬ್ಬೂರು ಗ್ರಾಮ ಪಂಚಾಯ್ತಿಗೆ ದಿವ್ಯ ದೀಪು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕಾರ್ಯ ನಿರ್ವಹಣಾ ಆಡಳಿತ ಅಧಿಕಾರಿ ಹರ್ಷಕುಮಾರ್ ಘೋಷಣೆ ಮಾಡಿದ್ರು. ನೂತನ ಅಧ್ಯಕ್ಷರಾಗಿ ದಿವ್ಯ ಅವರು ಆಯ್ಕೆಯಾಗ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಗೆದ್ದವರಿಗೆ ಹೂವಿನ ಹಾರ ಹಾಕಿ ಸಂಭ್ರಮಿಸಿದ್ರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷರಾದ ದಿವ್ಯ, ಈ ಗೆಲುವನ್ನು ಗ್ರಾಮಾಂತರ ಶಾಸಕರಾದ ಸುರೇಶ್ ಗೌಡ ಅವರಿಗೆ ಅರ್ಪಿಸುತ್ತೇನೆ ಎಂದ್ರು. ಪಂಚಾಯತಿ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಹೊತ್ತು ನೀಡಿ ಅಭಿವೃದ್ಧಿಪಡಿಸುತ್ತೇನೆ. ನನ್ನ ಗೆಲುವಿಗೆ ಸಹಕರಿಸಿದ ಸರ್ವ ಸದಸ್ಯರೆಲ್ಲರೂ ಅಭಿನಂದನೆ ಸಲ್ಲಿಸಿದ್ರು. ಹೆಬ್ಬೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಮುಖಂಡ ಮಾಸ್ತಿಗೌಡ ಮಾತನಾ̧ಡಿ 25 ವರ್ಷಗಳಿಂದ ಹೆಬ್ಬೂರು ಗ್ರಾಮ ಪಂಚಾಯಿತಿ ಸುರೇಶ್ ಗೌಡರ ಅಭಿವೃದ್ಧಿ ಕಾರ್ಯ ಮೆಚ್ಚಿ ಸತತವಾಗಿ ಬಿಜೆಪಿಗೆ ಮತ ಹಾಕ್ತಿದ್ದಾರೆ. ಈಗ ಆಯ್ಕೆಯಾದವರು ಕೂಡ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸಲಹೆ ನೀಡಿದ್ರು.
ಇದೇ ವೇಳೆ ಹೆಬ್ಬೂರು ಗ್ರಾಮ ಪಂಚಾಯ್ತಿಯ ಸದಸ್ಯರು, ಬಿಜೆಪಿ ಮುಖಂಡರು, ಬೆಂಬಲಿಗರು ಸೇರಿ ಹಲವಾರು ಮಂದಿ ಉಪಸ್ಥಿತರಿದ್ದರು.