ಸಿನಿಮಾ : ನೃತ್ಯಗಾರ್ತಿ ಮತ್ತು ನಟಿ ಧನಶ್ರೀ ವರ್ಮಾ, ಕ್ರಿಕೆಟಿಗ ಯಜುವೇಂದ್ರ ಚಹಲ್ ಜೊತೆಗಿನ ಡಿವೋರ್ಸ್ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಆಗುತ್ತಿದ್ದ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ಗಳ ಬಗ್ಗೆ ಧನಶ್ರೀ ಸ್ಪಷ್ಟನೆ ನೀಡಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಧನಶ್ರೀ ಹೇಳಿದ್ದು,"ಟ್ರೋಲ್‌ಗಳು, ಟೀಕೆಗಳು ನನ್ನ ಮೇಲೆ ಯಾವಾಗಲೂ ಬರುವಂತಿವೆ. ಆದರೆ ನಾನು ಮಾನಸಿಕವಾಗಿ ಬಲವಾಗಿದ್ದರಿಂದ, ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಗಮನ ಎಂದಿಗೂ ಕೆಲಸದ ಮೇಲಿರುತ್ತದೆ. ನನ್ನ ಗುರಿ ಮತ್ತು ಬೆಳವಣಿಗೆದಾರಿಗೆ ನಾನು ನಿಷ್ಠೆಯಿಂದ ಇರುತ್ತೇನೆ" ಎಂದು ಹೇಳಿದ್ದಾರೆ. ವೈವಾಹಿಕ ಬದುಕಿನ ಬದಲಾವಣೆ ಬಳಿಕ ಧನಶ್ರೀ ತನ್ನ ವೃತ್ತಿಪರ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವುದು ಸ್ಪಷ್ಟವಾಗಿದೆ.