ಪೇಡ ಎಲ್ಲರಿಗೂ ಇಷ್ಟವಾಗುವಂತಹ ಜನಪ್ರಿಯ ತಿಂಡಿ ತಿನಿಸು. ಡೈರಿ ಉತ್ಪನ್ನಗಳಲ್ಲಿ ಖೋವಾ ಪೇಡಾ ಅತ್ಯಂತ ರುಚಿಕರವಾದ ಸಿಹಿ ತಿಂಡಿ. ಇದು ಭಾರತೀಯ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು.
ಪೇಡ ಮಾಡಲು ಬೇಕಾಗುವ ಸಾಮಗಿಗಳು:
*ಹಾಲಿನ ಪುಡಿ 1 ಬೌಲ್
*ತುಪ್ಪ 2 ಚಮಚ
*ಸಕ್ಕರೆ ಪುಡಿ 3/4 ಬೌಲ್
*ಹಾಲು 1/2 ಬೌಲ್
*ಏಲಕ್ಕಿ ಪುಡಿ ಸ್ವಲ್ಪ
ರುಚಿಕರವಾದ ಪೇಡ ಮಾಡುವ ವಿಧಾನ:
ಮೊದಲು ಒಂದು ಪ್ಯಾನ್ ನಲ್ಲಿ 1 ಚಮಚ ತುಪ್ಪ ಹಾಕಿ ಕರಗಿಸಿ ನಂತರ ಹಾಲು ಸಕ್ಕರೆ ಪುಡಿ ಹಾಕಿ. ಸಕ್ಕರೆ ಕರಗಿದ ಮೇಲೆ ಹಾಲಿನ ಪುಡಿ, ಏಲಕ್ಕಿ ಪುಡಿ ಉದುರಿಸಿ ಚೆನ್ನಾಗಿ ಗಂಟಾಗದ ಹಾಗೆ ಕಲಸಿ. [ಕೈಆಡಿಸಿ] ನಂತರ ಮತ್ತೊಂದು ಚಮಚ ತುಪ್ಪ ಹಾಕಿ ತಳ ಬಿಡುವವರೆಗೂ ಮಿಶ್ರಣ ಮಾಡುತ್ತಲೇ ಇರಿ. ನಂತರ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಕೈಗೆ ತುಪ್ಪ ಸವರಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಿ ಪೇಡ ಬೇಕಾದ ಆಕಾರದಲ್ಲಿ ಸಿದ್ಧ ಪಡಿಸಿದರೆ ರುಚಿಯಾದ ಪೇಡ ರೆಡಿ.