ತುಮಕೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ(Actor Darshan) ದರ್ಶನ್, ಆಪ್ತ ಗೆಳತಿ ಪವಿತ್ರಾಗೌಡ ಸೇರಿದಂತೆ 17 ಆರೋಪಿಗಳು ಜೈಲು ಪಾಲಾಗಿದ್ದು, ಅದರಲ್ಲಿ ಮೂವರಲ್ಲಿ ಜಾಮೀನು ಸಿಕ್ಕು 10 ದಿನಗಳು ಕಳೆದಿತ್ತು. ಆದರೆ ಶ್ಯೂರಿಟಿ ಸಮಸ್ಯೆಯಿಂದ ಹೊರ ಬಂದಿರಲಿಲ್ಲ. ಜಾಮೀನು ಸಿಕ್ಕ ಮೂವರು ಆರೋಪಿಗಳಿಗೆ ಬೇರೆ ಬೇರೆಯವರಿಂದ ಶ್ಯೂರಿಟಿ ಸಿಕ್ಕಿದ್ದು, ಇಂದು ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಎ15 ಕಾರ್ತಿಕ್, ಎ16 ಕೇಶವಮೂರ್ತಿ ಹಾಗೂ ಎ17 ನಿಖಿಲ್ ಗೆ ಕಳೆದ 10 ದಿನಗಳ ಹಿಂದೆ ಸೆಷನ್ಸ್ ಕೋರ್ಟ್ ನಲ್ಲಿಯೇ ಜಾಮೀನು(Bail) ಸಿಕ್ಕಿದೆ. ಆದರೆ, ಶ್ಯೂರಿಟಿ ಸಮಸ್ಯೆಯಿಂದ ಬಿಡುಗಡೆಯಾಗಿರಲಿಲ್ಲ. ಸಧ್ಯ ಶ್ಯೂರಿಟಿ ಸಿಕ್ಕಿದ್ದು, ಅಕ್ಟೋಬರ್ 2, ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಈ ವೇಳೆ ಮಾತನಾಡಿರುವ ಮೂವರು, ನಾವು ಈಗಾಗ್ಲೇ ಹೇಳಿಕೆ ನೀಡಿದ್ದೇನೆ. ಪ್ರಕರಣ ಕೋರ್ಟ್ ನಲ್ಲಿದೆ. ಬೇರೆ ಏನೂ ಸಮಸ್ಯೆಯಿಲ್ಲವೆಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ