Dandi maramma templeತುಮಕೂರು
ಮಧುಗಿರಿ ಇತಿಹಾಸ ಪ್ರಸಿದ್ಧ ದಂಡಿಮಾರಮ್ಮ ಈ ಭಾಗದ ಶಕ್ತಿ ದೇವತೆ ಎಂದು ಖ್ಯಾತಿಯಾಗಿದ್ದು ಯಾವುದೆ ರಾಜಕಾರಣಿಗಳು ಬಂದರು ದಂಡಿಮಾರಮ್ಮನ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಮುಂದಿನ ರಾಜಕೀಯ ನಡೆ ಅರಂಭಿಸುವುದು ವಾಡಿಕೆಯಾಗಿದೆ. ಸಹಕಾರಿ ಸಚಿವ ಕೆ.ಎನ್ ರಾಜಣ್ಣನವರ ಮಾರ್ಗದರ್ಶನದಲ್ಲಿ ವಿ.ಪ ಸದಸ್ಯ ಆರ್ ರಾಜೇಂದ್ರ ನೇತೃತ್ವದಲ್ಲಿ ಮುನ್ನುಡಿ ಬರೆಯಲಿದ್ದು, ಇದೇ ಜನವರಿ 24 ರಿಂದ ಮೂರು ದಿನಗಳ ಕಾಲ ತೆಪ್ಪೋತ್ಸವ ನಡೆಯಲಿದ್ದು, ಭಕ್ತಿ ಪರಾಕಾಷ್ಠೆ ಮೆರೆದಿದೆ.
ಪೂರ್ವಜರ ಕಾಲದಿಂದಲೂ ದಂಡಿಮಾರಮ್ಮನ ಜಾತ್ರೆ ಹಾಗೂ ತೆಪ್ಪೋತ್ಸವ ನಡೆಯುತ್ತಾ ಬಂದಿದ್ದು 1974 ರಲ್ಲಿ ನಡೆದೆ ದುರಂತದಿಂದ ತೆಪ್ಪೋತ್ಸವ ಸ್ಥಗಿತವಾಗಿತ್ತು. ಇದೀಗಾ ಸಾರ್ವಜನಿಕರ ಅಪೇಕ್ಷೇ ಹಾಗೂ ಭಕ್ತಾದಿಗಳ ಒತ್ತಾಸೆಯ ಮೇರೆಗೆ ಅದ್ದೂರಿಯಾಗಿ ತೆಪ್ಪೋತ್ಸವ ಕಾರ್ಯಕ್ರಮ ಮಾಡಲು ವಿ.ಪ ಸದಸ್ಯ ಆರ್ ರಾಜೇಂದ್ರ ಅವರ ತಂಡ ಸಿದ್ಧತೆಯಲ್ಲಿ ತೊಡಗಿದೆ.
ತೆಪ್ಪೋತ್ಸವದ ಅಂಗವಾಗಿ ಕಾಶಿಯಿಂದ ಪಂಡಿತರು ಆಗಮಿಸಿ ಗಂಗಾ ಆರತಿ ನೆರವೇರಿಸಲಿದ್ದು, ವಿಶೇಷವಾಗಿ ಕಳಸಾ ಪೂಜೆ, ಹುಲಿವೇಷ, ಚಂಡೆಹೋಮ ಸೇರಿದಂತೆ ಇನ್ನೀತರ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅದ್ದೂರಿ ತೆಪ್ಪೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ. ಇನ್ನೂ ತೆಪ್ಪೋತ್ಸವಕ್ಕೆ ಚೋಳೇನಹಳ್ಳಿ ಕೆರೆ ಆಸುಪಾಸಿನಲ್ಲಿ ಮುಂಜಾಗ್ರತ ಕ್ರಮವಾಗಿ ಸಕಲ ಸಿದ್ಧತೆಗೊಳಿಸಿದ್ದು ಯಾವುದೆ ಅನಾಹುತ ಸಂಭವಿಸದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.