KANPUR: ಬೆಂಕಿಯ ಕೆನ್ನಲಾಗಿಗೆ ದಂಪತಿ ಸೇರಿ 3 ಮಕ್ಕಳು ಸಜೀವ ದಹನ

ಉತ್ತರ ಪ್ರದೇಶ: 

5 ಅಂತಸ್ತಿನ ಕಟ್ಟಡವೊಂದರಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದಾಗಿ ದಂಪತಿ ಸೇರಿ ಮೂವರು ಹೆಣ್ಣು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾನ್ಪುರದ ಚಾಮನ್​ಗಂಜ್​ ಪ್ರದೇಶದಲ್ಲಿ ರಾತ್ರಿ ನಡೆದಿದೆ.

ಈ ಅಗ್ನಿ ಅವಘಡದಲ್ಲಿ 45 ವರ್ಷದ ಮೊಹಮ್ಮದ್​ ಡ್ಯಾನಿಶ್​, ಪತ್ನಿ 42 ವರ್ಷದ ನಜ್ನೀನ್​ ಸಬಾ ಹಾಗೂ ಅವರ 15, 12, 7 ವರ್ಷದ ಮೂವರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಚಮನ್​ಗಂಜ್​ ಪೊಲೀಸ್​ ಠಾಣೆ ವ್ಯಾಪ್ತಿಯ ಪ್ರೇಮ್​ ನಗರ ಪ್ರದೇಶದಲ್ಲಿರುವ 5 ಅಂತಸ್ತಿನ ಕಟ್ಟಡದ ಮೂರನೇ ಮತ್ತ ನಾಲ್ಕನೇ ಮಹಡಿಗಳಲ್ಲಿ ಅನೇಕ ಕುಟುಂಬಗಳು ವಾಸ ಮಾಡುತ್ತಿದ್ರು ಎನ್ನಲಾಗಿದೆ. ಮೊದಲ ಮತ್ತು ಎರಡನೇ ಮಹಡಿಯಲ್ಲಿ ಶೂ, ಚಪ್ಪಲಿ ತಯಾರಿಕಾ ಕಾರ್ಖಾನೆ ಇತ್ತು ಎನ್ನಲಾಗಿದೆ. ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಇಡೀ ಬಿಲ್ಡಿಂಗ್‌ ಆವರಿಸಿದೆ. ಇನ್ನು ಬೆಂಕಿಯ ಹೊತ್ತಿರುವುದನ್ನು ಕಂಡ ಸ್ಥಳೀಯರ ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳಕ್ಕೆ ಬಂದರಾದ್ರು ಆ ಐವರ ಜೀವವನ್ನು ಉಳಿಸಲಾಗಲಿಲ್ವಂತೆ.

ಬೆಂಕಿ ಕಾಣಿಸಿಕೊಂಡ ಕ್ಷಣ ಅದಾಗಲೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಜನ ಹೊರಗೆ ಓಡಿ ಬಂದಿದ್ದಾರೆ. ಇನ್ನು ಅನೇಕರು ಕಟ್ಟಡದೊಳಗೆ ಸಿಲುಕಿಕೊಂಡಿದ್ರಂತೆ. ಕಟ್ಟಡದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವಾಗ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಪ್ರಯತ್ನಿದ್ದಾರೆ. ಆದ್ರೆ, ಈ ಮಧ್ಯೆ ದಂಪತಿ, ಹಾಗೂ ಅವರ ಮೂವರು ಮಕ್ಕಳು ಕಟ್ಟಡದಲ್ಲಿ ಸಿಲುಕಿಕೊಂಡಿರುವ ಮಾಹಿತಿ ಸಿಕ್ಕಿದೆ. ಅಗ್ನಿ ಶಾಮಕ ದಳದ ತಂಡ ಎಷ್ಟೇ ಪ್ರಯತ್ನ ಪಟ್ಟರೂ ಆ ಜೀವಗಳನ್ನು ಉಳಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಇನ್ನು ಮಧ್ಯರಾತ್ರಿ 1.30ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯ್ತು ಎನ್ನಲಾಗಿದೆ.  ಆದ್ರೆ ಸ್ವಲ್ಪ ಸಮಯದ ನಂತರ ಮತ್ತೆ ಬೆಂಕಿ ಹೆಚ್ಚಾಗಿದೆ. ಮತ್ತೆ 2 ಗಂಟೆ ಸುಮಾರಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿ ತಹಬದಿಗೆ ಬಂದ ನಂತ್ರ  2 ಗಂಟೆ ಸುಮಾರಿಗೆ ಮೂರು ಮೃತದೇಹಗಳನ್ನು ಹೊರತೆಗೆಯಲಾಯ್ತು ಎನ್ನಲಾಗಿದೆ.

Author:

...
Keerthana J

Copy Editor

prajashakthi tv

share
No Reviews