ಬೆಂಗಳೂರು : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ್ ಗಾಂಧಿಯವರ ಪುಣ್ಯಸ್ಮರಣೆಯ ಅಂಗವಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮತ್ತು ಮುಖಂಡರು ಭಾಗಿಯಾಗಿದ್ದರು.
ಈ ಪುಣ್ಯಸ್ಮರಣೆಯಲ್ಲಿ ಪಕ್ಷದ ಹಿರಿಯರು ರಾಜೀವ್ ಗಾಂಧಿಯ ಕೊಡುಗೆಗಳನ್ನು ಸ್ಮರಿಸಿದರು. ಅವರ ಇನ್ಫರ್ಮೇಶನ್ ಟೆಕ್ನಾಲಜಿ, ದೂರ ಸಂವಹನ ಕ್ಷೇತ್ರದ ಕ್ರಾಂತಿಕಾರಿ ಯೋಚನೆಗಳು, ಯುವ ಜನತೆಗೆ ನೀಡಿದ ಪ್ರೇರಣೆ ಮತ್ತು ಭಾರತವನ್ನು ಮುಂದಾಳುವ ನೂರನೇ ದಶಕದತ್ತ ದಿಟ್ಟ ಹೆಜ್ಜೆಯಲ್ಲಿ ಕರೆದೊಯ್ದ ನಾಯಕತ್ವವನ್ನು ನೆನೆದರು.
ಕೆಪಿಸಿಸಿ ಅಧ್ಯಕ್ಷರು ಸೇರಿ ಅನೇಕ ಹಿರಿಯ ಮುಖಂಡರು, ಶಾಸಕರು, ಮತ್ತು ಪಕ್ಷದ ಕಾರ್ಯಕರ್ತರು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಈ ಸಂದರ್ಭ ರಾಜೀವ್ ಗಾಂಧಿಯ ಜೀವನದ ಸಾಧನೆಗಳ ಕುರಿತಾಗಿ ಪ್ರಬಂಧ ವಾಚನ, ಭಾವಪೂರ್ಣ ಭಾಷಣಗಳು ನಡೆಯಿತು