ಹಾಲಿನ ದರ ಏರಿಕೆ ಬೆನ್ನಲ್ಲೇ ಕಾಫಿ ಟೀ ದರವೂ ಹೆಚ್ಚಳ

ರಾಜ್ಯ ಸರ್ಕಾರವು ಹಾಲು, ವಿದ್ಯುತ್, ಕಸ ಸಂಗ್ರಹಣೆ ಮತ್ತು ಡೀಸೆಲ್ ದರಗಳನ್ನು ಹೆಚ್ಚಿಸಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಲಿನ ದರ ಏರಿಕೆಯ ಪರಿಣಾಮವಾಗಿ ಟೀ ಮತ್ತು ಕಾಫಿ ದರವೂ ಕೂಡ ಏರಿಕೆಯಾಗಿವೆ.

ಹೋಟೆಲ್ ಗಳಲ್ಲಿ ಕಾಫಿ, ಟೀ ದರ ಏರಿಕೆ ಕಂಡಿದ್ದು, ಒಂದು ಗ್ಲಾಸ್ ಕಾಫಿ ಮತ್ತು ಟೀ ಬೆಲೆ 5 ರಿಂದ 10 ರೂಪಾಯಿವರೆಗೆ ಏರಿಕೆ  ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಸಾಕಷ್ಟು ಹೋಟೆಲ್ ಗಳು ಬೆಲೆ ಏರಿಕೆ ಮಾಡಿದೆ. ಸರ್ಕಾರ ಒಂದು ಲೀಟರ್ ಹಾಲಿಗೆ 4 ರೂಪಾಯಿ ಏರಿಕೆ ಮಾಡಿದೆ. ಆದರೆ ಹೋಟೆಲ್ಗಳು ಕಾಫಿ, ಟೀಗೆ 5  ರೂಪಾಯಿ ಏರಿಕೆ ಮಾಡಿದ್ದಾರೆ. ಹೀಗಾಗಿ ಜನ ಇವರು ನಮ್ಮ  ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಫಿ, ಚಹಾ ಮಾತ್ರವಲ್ಲದೆ ಹಾಲಿನಿಂದ ತಯಾರಿಸುವ ಇತರ ಉತ್ಪನ್ನಗಳ ಬೆಲೆಯೂ ಏರಿಕೆಯಾಗಲಿದೆ. ಹಾಲಿನ ಉತ್ಪನ್ನಗಳಾದ ಫೇಡಾ, ಪನ್ನೀರ್ ಇತ್ಯಾದಿಗಳ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ. ಹಾಲಿನ ದರ ಹೆಚ್ಚಳದಿಂದ ಇತರ ಉತ್ಪನ್ನಗಳ ತಯಾರಿಕಾ ವೆಚ್ಚವೂ ಹೆಚ್ಚಾಗುತ್ತಿದೆ. 

 

Author:

share
No Reviews