ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 8 ನೇ ಬಾರಿ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ ಪರ ಕೆಲವರು ವಾದ ಮಾಡಿದ್ರೆ.. ಬಜೆಟ್ ವಿರೋಧಿಸಿ ಹಲವರು ವಿರೋಧಿಸುತ್ತಾರೆ… ಈ ಬಾರಿ ನಿರ್ಮಲಾ ಮಂಡಿಸಿರೋ ಬಜೆಟ್ ರೈತ ವಿರೋಧಿ, ಜನ ವಿರೋಧಿ ಬಜೆಟ್ ಆಗಿದೆ ಎಂದು ತುಮಕೂರಿನಲ್ಲಿ CITU ಅಶೋಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. CITU ಸಂಘಟನೆಯ ನಾರಾರು ಮಂದಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು.
ಈ ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಮಲ ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನಲ್ಲಿಸಿಐಟಿಯು ವಿರೋಧಿಸುತ್ತದೆ ಏಕೆಂದರೆ ಈ ಬಜೆಟ್ ನಲ್ಲಿ ಕಾರ್ಮಿಕರಿಗಾಗಲಿ, ಕೃಷಿ ಕರಿಗಾಗಲಿ, ದುಡಿಯುವಂತಹ ವರ್ಗಕ್ಕಾಗಲಿ, ಈ ಬಜೆಟ್ ನಿಂದ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ 2014 ರಿಂದ ಬಜೆಟ್ ಮಂಡಿಸುತ್ತಾ ಬರುತ್ತಿದ್ದಾರೆ ಆದರೆ ಈ ಬಜೆಟ್ ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ,ಆರೋಗ್ಯ ಕ್ಷೇತ್ರ, ಶಿಕ್ಷಣ ಕ್ಷೇತ್ರಕ್ಕೆ ಅಂತಂತವಾಗಿ ಕಡಿತ ಮಾಡಿಕೊಂಡು ಬಂದಿದ್ದಾರೆ. ಆದರೆ ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲವಾಗುವಂತಹ ಬಜೆಟ್ ಮಂಡಿಸಿದ್ದಾರೆ. ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ಮಂಡಿಸಿರುವುದು ಶ್ರೀಮಂತರಿಂದ ಶ್ರೀಮಂತ್ರಿಗೋಸ್ಕರ ಮಂಡಿಸಿರುವ ಬಜೆಟ್ ಎಂದು ಆರೋಪಿಸಿದ್ರು.