ಚೀನಾದ ಹೊಸ ಹೆಜ್ಜೆ | ಅಪರೂಪದ ಭೂಮಿಯ ಮ್ಯಾಗ್ನೆಟ್‌ಗಳ ರಫ್ತಿಗೆ ನಿರ್ಬಂಧ

ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಚೀನಾ ಈಗ ಮಹತ್ವದ ತಾಂತ್ರಿಕ ಸಂಪನ್ಮೂಲವಾದ ಅಪರೂಪದ ಭೂಮಿಯ ಮ್ಯಾಗ್ನೆಟ್‌ಗಳ (Rare Earth Magnets) ರಫ್ತಿಗೆ ನಿರ್ಬಂಧ ವಿಧಿಸಿದ್ದು, ಇದರಿಂದ ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳ ಎಲೆಕ್ಟ್ರಿಕ್ ವಾಹನ (EV) ಹಾಗೂ ತಂತ್ರಜ್ಞಾನ ಕ್ಷೇತ್ರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.

ಚೀನಾ ತನ್ನ ದೇಶೀಯ ಉದ್ಯಮವನ್ನು ರಕ್ಷಿಸಲು ಮತ್ತು ನೈಜ ಆರ್ಥಿಕ ಲಾಭ ಪಡೆಯಲು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗಿದ್ದು, ಇದರಿಂದ ಎಲೆಕ್ಟ್ರಿಕ್ ವಾಹನಗಳು (EVs), ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳ ಉತ್ಪಾದನೆ, ನವೀನ ಇಂಧನ ಉತ್ಪಾದನಾ ತಂತ್ರಜ್ಞಾನಗಳು, ಕ್ಷಿಪಣಿಯಂಥ ಸೇನಾ ತಂತ್ರಜ್ಞಾನ ಮೇಲೆ ಪರಿಣಾಮ ಬೀರಲಿದೆ.

ಭಾರತ ತನ್ನ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನ ಅಭಿವೃದ್ಧಿಗೊಳಿಸುತ್ತಿರುವ ಈ ಸಂದರ್ಭದಲ್ಲಿ, ಅಗತ್ಯ ಸಂಪನ್ನಗಳನ್ನು ಪರಿತೋಷಿಸಲು ಚೀನಾದಿಂದ ಅಂಶ ಆಮದು ನಿರ್ಣಾಯಕವಾಗಿತ್ತು. ಈ ನಿರ್ಬಂಧದಿಂದ ಭಾರತದಲ್ಲಿ EV ಉತ್ಪಾದನಾ ವೆಚ್ಚದಲ್ಲಿ ಏರಿಕೆ, ಉತ್ಪಾದನಾ ವಿಳಂಬವಾಗಿ ಹೊಸ ಉತ್ಫಾದನಾ ಘಟಕಗಳ ಯೋಜನೆಗಳಿಗೆ ಅಡ್ಡಿಯಾಗುತ್ತದೆ.

ಅಮೆರಿಕ, ಜಪಾನ್ ಸೇರಿದಂತೆ ಹಲವು ದೇಶಗಳು ಚೀನಾದ ಈ ನಿರ್ಧಾರವನ್ನು ವ್ಯಾಪಾರದ ರಾಜಕೀಯಕರಣ ಎಂದು ಕಿಡಿಕಾರಿವೆ. ಇದೀಗ ವಿಶ್ವದ ಹಲವು ರಾಷ್ಟ್ರಗಳು ಚೀನಾವಿರತರಾಗಿ ಬದಲಿ ಸರಬರಾಜುದಾರರನ್ನು ಹುಡುಕಲು ಪ್ರಯತ್ನಿಸುತ್ತಿವೆ. ಭಾರತದಲ್ಲಿಯೇ ಅಪರೂಪದ ಭೂಮಿಯ ಸಂಪತ್ತು ಮತ್ತು ಮ್ಯಾಗ್ನೆಟ್‌ಗಳ ಸಂಶೋಧನೆ, ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಉಂಟಾಗಿದೆ. ಇಸ್ರೋ ಮತ್ತು ಖನಿಜ ಅಭಿವೃದ್ಧಿ ನಿಗಮ (AMD) ಈಗಾಗಲೇ ಕೆಲವು ಅಧ್ಯಯನಗಳನ್ನು ಪ್ರಾರಂಭಿಸಿದೆ.

Author:

...
Sushmitha N

Copy Editor

prajashakthi tv

share
No Reviews