ಚಿಕ್ಕಬಳ್ಳಾಪುರ : ತಾರಕಕ್ಕೇರಿದ ಅಂಬೇಡ್ಕರ್ ಪುತ್ಥಳಿ ಅಪಮಾನ ವಿಚಾರ | ದಲಿತ ಸಂಘಟನೆಗಳಿಂದ ಪ್ರತಿಭಟನೆ

ಅಂಬೇಡ್ಕರ್‌ ಪುತ್ಥಳಿ
ಅಂಬೇಡ್ಕರ್‌ ಪುತ್ಥಳಿ
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ವಿಚಾರ ಸಂಬಂಧ ಸಚಿವ ಎಂ.ಸಿ ಸುಧಾಕರ್‌ ಹಾಗೂ ಸಂಸದ ಸುಧಾಕರ್‌ ನಡುವೆ ವಾಗ್ವಾದ ತಾರಕಕ್ಕೇರಿದೆ. ಅಂಬೇಡ್ಕರ್‌ ಪುತ್ಥಳಿ ಲೋಕಾರ್ಪಣೆಗೆ ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಿತಿ ಒಪ್ಪಿಸಿಕೊಂಡಿದ್ದು ಉದ್ಘಾಟನೆ ಮಾಡಲು ಬಿಟ್ಟಿಲ್ಲ. ಅಂಬೇಡ್ಕರ್‌ ಪುತ್ಥಳಿಗೆ ಹಳೆಯ ಮಾಸಿದ ಬಟ್ಟೆ, ಟಾರ್ಪಲ್‌ ಹೊದಿಸಿದ್ದಾರೆ ಇದರಿಂದ ಅಂಬೇಡ್ಕರ್‌ ಪುತ್ಥಳಿಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಮುಖಂಡರು ಜಿಲ್ಲಾಡಳಿತ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಂತಾಮಣಿ ಪಟ್ಟಣದಲ್ಲಿ ನೂರಾರು ಮಂದಿ ದಲಿತ ಮುಖಂಡರು ಬೀದಿಗಿಳಿದು ಸಚಿವ ಎಂ.ಸಿ ಸುಧಾಕರ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಂಬೇಡ್ಕರ್ ಪ್ರತಿಮೆ ಅನಾವರಣ ಸಮಿತಿ ಅಂಬೇಡ್ಕರ್‌ ಪುತ್ಥಳಿಗೆ ಅನಾವರಣಕ್ಕೆ ಒಪ್ಪಿಕೊಂಡಿದ್ದರು ಲೋಕಾರ್ಪಣೆಗೆ ಸಚಿವರು ಬಿಡ್ತಾ ಇಲ್ಲ. ಅಂಬೇಡ್ಕರ್‌ ಪುತ್ಥಳಿಗೆ ಮಾಸಿದ ಬಟ್ಟೆ ಹಾಕಿ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ದಲಿತ ಮುಖಂಡರ ಪ್ರತಿಭಟನೆಗೆ ಸಂಸದ ಸುಧಾಕರ್‌ ಸಾಥ್‌ ನೀಡಿದ್ದಷ್ಟು, ಸಚಿವ ಎಂ.ಸಿ ಸುಧಾಕರ್‌ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದುರುದ್ದೇಶದಿಂದ ಅಂಬೇಡ್ಕರ್‌ ಪುತ್ಥಳಿಯನ್ನು ಅನಾವರಣ ಮಾಡಲು ಬಿಡುತ್ತಿಲ್ಲ , ಇದರ ಹಿಂದೆ ಕಾಣದ ಕೈಗಳು ಇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 

Author:

share
No Reviews