ಚಿಕ್ಕಬಳ್ಳಾಪುರ :
ಶಾಸಕ ಪ್ರದೀಪ್ ಈಶ್ವರ್ ತಮ್ಮ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮೂರಲ್ಲಿ ನಮ್ಮ ಶಾಸಕ ಕಾರ್ಯಕ್ರಮದ ನಿಮಿತ್ತ ಸಂಚಾರ ನಡೆಸುತ್ತಿದ್ದು, ಜನರಿಂದ ಸಮಸ್ಯೆಗಳನ್ನು ಆಲಿಸ್ತಾ ಇದ್ದಾರೆ. ಅದರಂತೆ ಇಂದು ಚಿಕ್ಕಬಳ್ಳಾಪುರ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯ್ತಿಯ ಬಂದ್ರಹಳ್ಳಿ ಗ್ರಾಮದಲ್ಲಿ ಸಂಚಾರ ನಡೆಸಿದರು. ಗ್ರಾಮದ ಸುತ್ತಾ ಸಂಚಾರ ಮಾಡಿದ ಶಾಸಕ ಪ್ರದೀಪ್ ಈಶ್ವರ್, ಕುಡಿಯುವ ನೀರು, ಚರಂಡಿ, ರಸ್ತೆ ಸೇರಿ ಮೂಲ ಭೂತ ಸೌಕರ್ಯಗಳ ಸಮಸ್ಯೆಯನ್ನು ಕಣ್ಣಾರೆ ಕಂಡಿದ್ದಾರೆ. ಅಲ್ಲದೇ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.
ಬಂದ್ರಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಸೇರಿ ಅನೇಕ ದೂರುಗಳನ್ನು ಗ್ರಾಮಸ್ಥರು ನೀಡಿದ್ದರು. ಈ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ನಮ್ಮೂರಲ್ಲಿ ನಮ್ಮ ಶಾಸಕ ಕಾರ್ಯಕ್ರಮದ ಹಮ್ಮಿಕೊಂಡಿದ್ದು, ಈ ಭಾಗದಲ್ಲಿ ಇಂದು ಬಂದ್ರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ಇಂಚಿಂಚೂ ಬಿಡದೇ ಸಂಚಾರ ಮಾಡಿದರು. ಈ ವೇಳೆ ಗ್ರಾಮದ ಮಧ್ಯಭಾಗದಲ್ಲಿ ಸಾರ್ವಜನಿಕರ ಮಧ್ಯೆಯೇ ಎಲ್ಲರಂತೆ ಕುಳಿತು ಒಂದೊಂದೆ ಸಮಸ್ಯೆಯನ್ನು ಆಲಿಸಿದರು. ಶಾಸಕರ ಸರಳತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮಸ್ಥರು ಪಂಚಾಯ್ತಿಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಲ್ಲ ಎಂದು ಆರೋಪ ಮಾಡಿದ್ದು. ಇದಕ್ಕೆ ಕೆರಳಿದ ಶಾಸಕ ಪ್ರದೀಪ್ ಈಶ್ವರ್, ನಿಮ್ಮ ಯೋಗ್ಯತೆಗೆ ಒಂದು ಪೋಟೋ ಖರೀದಿ ಮಾಡಕ್ಕೆ ಅಗಲ್ಲಾ ಅಂದರೆ ಏನಕ್ಕೆ ರೀ ನೀವು ಎಂದು ಗ್ರಾಮಸ್ಥರ ಮುಂದೆಯೇ ಗೌಡಗೆರೆ ಗ್ರಾಮ ಪಂಚಾಯ್ತಿ ಪಿಡಿಓ ಲೋಕೇಶ್ ಮೇಲೆ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಅಲ್ಲದೇ ಸಸ್ಪೆಂಡ್ ಮಾಡಿ ಬೀಸ್ಕಾತ್ತೀನಿ, ಕಾಮನ್ಸೆನ್ಸ್ ಇಲ್ವಾ ಒಂದು ಫೋಟೋ ಹಾಕೋಕೆ ಆಗಲ್ವಾ ಎಂದು ಶಾಸಕ ಪ್ರದೀಪ್ ಈಶ್ವರ್ ತರಾಟೆಗೆ ತೆಗೆದುಕೊಂಡರು.
ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರ ಸಂಚಾರಕ್ಕೆ ಹಾಗೂ ಅವರ ಸರಳತೆಗೆ ಕ್ಷೇತ್ರದ ಜನತೆ ಜೈಕಾರ ಹಾಕ್ತಿದ್ದಾರೆ.