ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಎಗ್ಗಿಲ್ಲದೇ ಸಾಗಾಟ ಆಗ್ತಿದೆ ಗೋ ಮಾಂಸ

ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ವಾಹನ
ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ವಾಹನ
ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ :

ಭಾರತದಲ್ಲಿ ಅದರಲ್ಲಿಯೂ ಕರುನಾಡಿನಲ್ಲಿ ಗೋ ಮಾತೆಗೆ ವಿಶೇಷ ಪೂಜ್ಯ ಸ್ಥಾನ ನೀಡಲಾಗುತ್ತಿದೆ. ಹಬ್ಬ ಹರಿದಿನಗಳಲ್ಲಿ, ಗೃಹಪ್ರವೇಶದಂತಹ ಸಂದರ್ಭದಲ್ಲಿ ಗೋಮಾತೆಯನ್ನು ಮನೆಗೆ ಪ್ರವೇಶಿಸಿ, ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಕ್ರಮ ಗೋ ಮಾಂಸ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡರು ಕೂಡ ಅಲ್ಲಲ್ಲಿ ಎಗ್ಗಿಲ್ಲದೇ ಅಕ್ರಮ ಗೋಮಾಂಸ ದಂಧೆ ನಡೆಯುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿ ಗ್ರಾಮದ ಬಳಿ ಆಂಧ್ರ ಮೂಲದ ವಾಹನದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಾಟ ಮಾಡ್ತಾ ಇದ್ದರು. ಗೋಮಾಂಸ ಸಾಗಾಟದ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಕೂಡಲೇ ಅಲರ್ಟ್‌ ಆದ ಪೊಲೀಸರು ಗೋಮಾಂಸ ಸಾಗಿಸುತ್ತಿದ್ದ ವಾಹನವನ್ನು ಚೇಸ್‌ ಮಾಡಿ ಹಿಡಿದ್ದಾರೆ. ಪೊಲೀಸರನ್ನು ಕಂಡ ಗೋಮಾಂಸ ಸಾಗಿಸುತ್ತಿದ್ದ ವಾಹನದ ಚಾಲಕ ರಸ್ತೆ ಬದಿ ಗಾಡಿಯನ್ನು ನಿಲ್ಲಿಸಿ ಎಸ್ಕೇಪ್‌ ಆಗಿದ್ದಾನೆ. ಗೋಮಾಂಸ ಸಾಗಿಸುತ್ತಿದ್ದ ವಾಹನ ಹಾಗೂ ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕನಿಗಾಗಿ ಬಲೆ ಬೀಸಿದ್ದಾರೆ.

Author:

share
No Reviews