CCL 2025 : ಚೆನ್ನೈ ರೈನೋಸ್‌ ವಿರುದ್ದ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್‌ ತಂಡ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಿನಿಮಾ-ಟಿವಿ

CCL 2025:

ಸಿಸಿಎಲ್ 11 ನೇ ಸೀಸನ್‌ ಕಳೆದ ವಾರ ಅದ್ದೂರಿಯಾಗಿ ಆರಂಭವಾಗಿದ್ದು. ಕರ್ನಾಟಕ ಬುಲ್ಡೋಜರ್ಸ್‌ ತಂಡ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸೆಲೆಬ್ರೆಟಿ ಕ್ರಿಕೆಟ್‌ ಲೀಗ್ನ ಮೊದಲ ಪಂದ್ಯವನ್ನು ಗೆದ್ದುಕೊಂಡು ಈಗ ಎರಡನೇ ಪಂದ್ಯವನ್ನು ಸಹ ಗೆದ್ದುಕೊಂಡಿದೆ. ನೆನ್ನೆ ಹೈದರಾಬಾದ್‌ ನಲ್ಲಿ ನಡೆದ ಪಂದ್ಯದಲ್ಲಿ 70 ರನ್ ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್‌ ಚೆನೈ ರೈನೋಸ್‌ ಅನ್ನು 7 ವಿಕೆಟ್ ಗಳಿಂದ ಸೋಲಿಸಿತು.

ಹೈದರಾಬಾದ್‌ ನ ರಾಜೀವ್‌ ಗಾಂಧೀ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್‌ ತಂಡ ಭರ್ಜರಿ ಪ್ರದರ್ಶನ ನೀಡಿ ಎರಡನೇ ಜಯ ಸಾಧಿಸಿದೆ. ಚೆನ್ನೈ ರೈನೋಸ್ ವಿರುದ್ದ ನಡೆದ ಪಂದ್ಯದಲ್ಲಿ  ಕರ್ನಾಟಕದ ಕಿಚ್ಚ ಸುದೀಪ್‌ ತಂಡ ಗೆಲುವು ಸಾಧಿಸಿದೆ. ಡಾರ್ಲಿಂಗ್‌ ಕೃಷ್ಣ ಅಮೋಘ ಆಲ್ ರೌಂಡರ್‌ ಆಗಿ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಟಾಸ್‌ ಗೆದ್ದ ಚೆನ್ನೈ ರೈನೋಸ್‌ ಮೊದಲು ಬ್ಯಾಟಿಂಗ್‌ ಮಾಡಿತು. ಚೆನ್ನೈ 10 ಓವರ್‌ ಗಳಲ್ಲಿ 3 ವಿಕೆಟ್‌ ಗೆ 108 ರನ್‌ ಸಿಡಿಸಿದ್ದಾರೆ. ಕರ್ನಾಟಕದ ಪರ ಚಂದನ್ ಕುಮಾರ್‌ 2 ವಿಕೆಟ್‌ ಹಾಗೂ ಗಣೇಶ್‌ 1 ವಿಕೆಟ್‌ ಪಡೆದರು. ಕರ್ನಾಟಕದ ಪರ ಆರಂಭಿಕ ಡಾರ್ಲಿಂಗ್‌ ಕೃಷ್ಣ 23 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ಸಿಡಿಸಿ 50 ರನ್‌ ಪಡೆದರು. ಕರಣ್‌ ಆರ್ಯನ್‌ 5 ಬೌಂಡರಿ, 3 ಸಿಕ್ಸರ್‌ ಸಿಡಿಸಿ 44 ರನ್ ಗಳಿಸಿ ಔಟಾದರು. ಹಾಗೂ ರಾಜೀವ್‌ ಹನು 11 , ಚಂದನ್ ಕುಮಾರ್‌ 15 ರನ್‌ ಸಿಡಿಸಿದರು. ಕರ್ನಾಟಕ 10 ಓವರ್ ಗಳಲ್ಲಿ 4 ವಿಕೆಟ್‌ ಗೆ 142 ರನ್‌ ಸಿಡಿಸಿ ಚೆನ್ನೈ ತಂಡವನ್ನು ಮಣಿಸಿದ್ದಾರೆ.

Author:

...
Editor

ManyaSoft Admin

Ads in Post
share
No Reviews